ಭೂತಾನ್ ಪ್ರವಾಸದಲ್ಲಿ ಮೋದಿ; ಜಲ ವಿದ್ಯುತ್ ಯೋಜನೆಗೆ ಚಾಲನೆ

Update: 2019-08-17 17:43 GMT

ಥಿಂಪು (ಭೂತಾನ್), ಆ. 17: ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೂತಾನ್‌ನಲ್ಲಿ ರೂಪೇ ಕಾರ್ಡನ್ನು ಬಿಡುಗಡೆಗೊಳಿಸಿದ್ದಾರೆ.

ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ಅವರು, ‘ಸಿಮ್‌ಟೋಖ ಝಾಂಗ್’ನಲ್ಲಿ ಖರೀದಿ ಮಾಡುವ ಮೂಲಕ ರೂಪೇಗೆ ಚಾಲನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಡಾ. ಲೊಟಾಯ್ ಶೆರಿಂಗ್ ಅವರ ಉಪಸ್ಥಿತಿಯಲ್ಲಿ ಒಟ್ಟು ಐದು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು.

‘‘1629ರಲ್ಲಿ ಶಬ್‌ಡ್ರಂಗ್ ನಮ್‌ಗ್ಯಾಲ್ ನಿರ್ಮಿಸಿರುವ ಸಿಮ್‌ಟೋಖ ಝಾಂಗ್ ಭೂತಾನ್‌ನ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಅದು ಭೂತಾನ್‌ನ ಅತ್ಯಂತ ಹಳೆಯ ಝಾಂಗ್ (ಅರಮನೆ)ಗಳಲ್ಲಿ ಒಂದಾಗಿದೆ. ಇಂದು ಈ ಐತಿಹಾಸಿಕ ಸ್ಮಾರಕದಲ್ಲಿ ಮೊದಲ ಬಾರಿಗೆ ವಿವಿಧ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಹಾಗೂ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ’’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಶನಿವಾರ ಟ್ವೀಟ್ ಮಾಡಿದ್ದಾರೆ.

 ಇದೇ ಸಂದರ್ಭದಲ್ಲಿ 5012 ಕೋಟಿ ರೂಪಾಯಿ ವೆಚ್ಚದ ಮಂಗ್ಡೇಚು ಜಲ ವಿದ್ಯುತ್ ಯೋಜನೆಗೆ ಪ್ರಧಾನಿ ಮೋದಿ ಆತಿಥೇಯ ದೇಶ ಪ್ರಧಾನಿಯೊಂದಿಗೆ ಜಂಟಿಯಾಗಿ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News