ಗಾಝಾ ಪಟ್ಟಿ ಮೇಲೆ ಇಸ್ರೇಲ್ ವಿಮಾನಗಳ ದಾಳಿ

Update: 2019-08-17 17:45 GMT

ಗಾಝಾ ನಗರ (ಫೆಲೆಸ್ತೀನ್), ಆ. 17: ಇಸ್ರೇಲಿ ಯುದ್ಧ ವಿಮಾನಗಳು ಶನಿವಾರ ಮುಂಜಾನೆ ಗಾಝಾ ಪಟ್ಟಿಯಲ್ಲಿ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿದವು, ಆದರೆ, ಯಾವುದೇ ಸಾವು-ನೋವು ಸಂಭವಿಸಿರುವುದು ವರದಿಯಾಗಿಲ್ಲ ಎಂದು ಫೆಲೆಸ್ತೀನಿಯನ್ ಭದ್ರತಾ ಮೂಲವೊಂದು ಹೇಳಿದೆ.

ಫೆಲೆಸ್ತೀನಿಯರು ಗಾಝಾ ಪಟ್ಟಿಯಿಂದ ದಕ್ಷಿಣ ಇಸ್ರೇಲ್‌ಗೆ ಶುಕ್ರವಾರ ರಾಕೆಟೊಂದನ್ನು ಹಾರಿಸಿದ ಬಳಿಕ ಇಸ್ರೇಲ್ ಈ ದಾಳಿಗಳನ್ನು ನಡೆಸಿದೆ.

ಇಸ್ರೇಲಿ ಯುದ್ಧ ವಿಮಾನಗಳು ಬೈತ್ ಹನೂನ್‌ನಲ್ಲಿರುವ ಹಮಾಸ್ ವೀಕ್ಷಣಾ ಕೇಂದ್ರ, ಗಾಝಾ ನಗರದ ಸಮೀಪದ ಒಂದು ಕಟ್ಟಡ ಹಾಗೂ ಗಾಝಾ ಪಟ್ಟಿಯ ಮಧ್ಯದಲ್ಲಿರುವ ಡೇರ್ ಅಲ್ ಬಲಾ ಸಮೀಪದ ಮೈದಾನಗಳನ್ನು ಗುರಿಯಾಗಿಸಿ ದಾಳಿ ನಡೆಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News