12 ಸಾವಿರ ಡಾಲರ್ ಬಹುಮಾನ ಗೆದ್ದ ನಿರ್ಗತಿಕ ಬಾಲಕಿಯರ ಆ್ಯಪ್ !

Update: 2019-08-18 04:07 GMT

ಚೆನ್ನೈ: ಇಲ್ಲಿನ ನಿರ್ಗತಿಕರ ಪಾಲನಾಗೃಹದ ಮೂವರು ಬಾಲಕಿಯರು ಅಭಿವೃದ್ಧಿಪಡಿಸಿದ ಸ್ಮಾರ್ಟ್‌ಫೋನ್ ಆ್ಯಪ್, ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ ಅಂತರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ 12 ಸಾವಿರ ಡಾಲರ್‌ಗಳ ಮೊದಲ ಬಹುಮಾನ ಗೆದ್ದಿದೆ.

ಹತ್ತರಿಂದ ಹದಿನಾಲ್ಕು ವರ್ಷದ ಬಾಲಕಿಯರಾದ ಸ್ಟೆಲ್ಲಾ, ಐಶ್ವರ್ಯ ಮತ್ತು ಅಕ್ಷರ ಅವರನ್ನೊಳಗೊಂಡ ಬ್ಯಾಟನ್ ತಂಡ, ಟೆಕ್ನೋವೇಶನ್ ಗರ್ಲ್ಸ್ ಎಂಬ ವಾರ್ಷಿಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದಿದೆ.

ಸಮಾಜಕಾರ್ಯ ಉಪಕ್ರಮಗಳಿಗೆ ಸಹಭಾಗಿತ್ವದ ಆ್ಯಪ್ ಒದಗಿಸುವ ಲಾಭರಹಿತ ಸಂಸ್ಥೆಯಾದ ಟೆಕ್ನೋವೇಶನ್ ಈ ಸ್ಪರ್ಧೆ ಆಯೋಜಿಸಿತ್ತು. ಒಟ್ಟು 57 ದೇಶಗಳ 7200 ಬಾಲಕಿಯರಿಗೆ ಆ್ಯಪ್ ಅಭಿವೃದ್ಧಿಪಡಿಸುವ ಟಾಸ್ಕ್ ನೀಡಲಾಗಿತ್ತು. ತಮ್ಮ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುವಂತೆ ಸೂಚಿಸಲಾಗಿತ್ತು. ಕಿರಿಯರ ವಿಭಾಗದಲ್ಲಿ ಬ್ಯಾಟನ್ ತಂಡ ಮೊದಲ ಬಹುಮಾನ ಗೆದ್ದಿದ್ದು, ಕೆನಡಾದ ಕ್ಲೌಡ್ 9 ತಂಡದಿಂದ ಕಠಿಣ ಸ್ಪರ್ಧೆ ಎದುರಾಗಿತ್ತು. ಸಾಮಾಜಿಕ ಉದ್ವಿಗ್ನತೆಯನ್ನು ಶಮನಗೊಳಿಸುವ ಡಿಜಿಟಲ್ ಡಾಗ್ ಮತ್ತು ವರ್ಚುವಲ್ ಥೆರಪಿಸ್ಟ್ ಆ್ಯಪನ್ನು ಈ ಕೆನಡಾ ತಂಡ ಸಿದ್ಧಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News