ಅಪಾಯದ ಮಟ್ಟ ತಲುಪಿದ ಯಮುನಾ ನದಿ; ‘24x7’ ಗಂಟೆ ನಿಗಾ: ಕೇಜ್ರಿವಾಲ್

Update: 2019-08-19 18:26 GMT

ಹೊಸದಿಲ್ಲಿ, ಆ. 19: ಯಮುನಾ ನದಿಯಲ್ಲಿ ನೀರಿನ ಮಟ್ಟ ಸೋಮವಾರ ಅಪಾಯದ ಮಟ್ಟ ತಲುಪಿದೆ. ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಸನ್ನದ್ಧತೆ ಹಾಗೂ ಸರಕಾರಿ ಇಲಾಖೆಗಳು ಕೈಗೊಳ್ಳುವ ಪರಿಹಾರ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ‘‘ಯಮುನಾ ನದಿಯಲ್ಲಿ ನೀರಿನ ಮಟ್ಟ ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆ ಇದೆ. ನೀರಿನ ಮಟ್ಟ ಈ ಹಂತಕ್ಕೆ ತಲುಪಿದರೆ, ಮುಂದೆ ಎರಡು ದಿನಗಳ ಕಾಲ ನೀರಿನ ರಭಸ ಹೆಚ್ಚಾಗಲಿದೆ.

ನಮ್ಮ ಎಲ್ಲ ಅಧಿಕಾರಿಗಳು ಹಾಗೂ ಸಚಿವರು ಪರಿಸ್ಥಿತಿ ಬಗ್ಗೆ ‘24x7’ ಗಂಟೆ ನಿಗಾ ವಹಿಸಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಭಾರೀ ಮಳೆ ಉತ್ತರ ಭಾರತದದ ಹಲವು ರಾಜ್ಯಗಳಲ್ಲಿ ಅವಾಂತರ ಸೃಷ್ಟಿಸಿದೆ. ಭೂಕುಸಿತ, ನೆರೆ ಹಾಗೂ ಮೇಘ ಸ್ಫೋಟದಿಂದ ಕನಿಷ್ಠ 28 ಜನರು ಜೀವ ಕಳೆದುಕೊಂಡಿದ್ದಾರೆ. ಸೋಮವಾರ ಯುಮುನಾ ನದಿ ನೀರಿನ ಮಟ್ಟ 204.8 ಎಂ ಮಟ್ಟಕ್ಕೆ ತಲುಪಿದೆ. ಶೀಘ್ರದಲ್ಲಿ ಇದು ಅಪಾಯದ ಮಟ್ಟ 205.3 ಎಂ ಗೆ ತಲುಪುವ ಸಾಧ್ಯತೆ ಇದೆ. 2008ರಲ್ಲಿ ಇದು 206.05ಎಂಗೆ ತಲುಪಿತ್ತು ಅತ್ಯಧಿಕ ನೀರಿನ ಮಟ್ಟ 1978ರಲ್ಲಿ ದಾಖಲಾಗಿದ್ದು, ಆಗ ನೀರಿನ ಮಟ್ಟ 207.4ಕ್ಕೆ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News