ಮಲೇಷ್ಯಾದಲ್ಲಿ ಝಾಕಿರ್ ನಾಯ್ಕ್ ಭಾಷಣಕ್ಕೆ ನಿಷೇಧ

Update: 2019-08-20 07:34 GMT

ಹೊಸದಿಲ್ಲಿ, ಆ.20: ಜನಾಂಗೀಯ ವಿರೋಧಿ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್‍ ರಿಗೆ ಮಲೇಷ್ಯಾದಲ್ಲಿ ಯಾವುದೇ ಭಾಷಣ ನೀಡದಂತೆ ನಿಷೇಧ ಹೇರಲಾಗಿದೆ.

ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ಈ  ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಮಲೇಷ್ಯಾದಲ್ಲಿ  ಹಿಂದುಗಳು ಹಾಗೂ ಚೀನೀ ಸಮುದಾಯಗಳ ಕುರಿತ ತಮ್ಮ ಹೇಳಿಕೆಗಳ ಮೂಲಕ ಅವರು ಶಾಂತಿ ಕದಡುವ ಉದ್ದೇಶ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಅವರನ್ನು ವಿಚಾರಣೆಗೆ ಒಪಡಿಸಿದ್ದಾರೆ.  ಪ್ರಚೋದನಾಕಾರಿ ಭಾಷಣ  ಮಾಡಿದ ಆರೋಪ ಕೂಡ ಅವರ ಮೇಲೆ ಹೊರಿಸಲಾಗಿದೆ.

ಭಾರತದಲ್ಲಿನ ಮುಸ್ಲಿಮರಿಗಿಂತ ಮಲೇಷ್ಯಾದ ಹಿಂದುಗಳಿಗೆ 100 ಪಟ್ಟು ಹೆಚ್ಚು ಹಕ್ಕುಗಳಿವೆ ಎಂದು ಝಾಕಿರ್ ನಾಯ್ಕ್ ಆಗಸ್ಟ್ 3ರಂದು ಹೇಳಿಕೆ ನೀಡಿದ್ದರು. ಮಲೇಷ್ಯಾದ ಚೀನೀ ಸಮುದಾಯದ ವಿರುದ್ಧ ಕೂಡ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.  ಈ ಹೇಳಿಕೆಗಳಿಗೆ ನಂತರ ಕ್ಷಮೆ ಯಾಚಿಸಿದ್ದರಲ್ಲದೆ  ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಝಾಕಿರ್  ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News