ಡೆಬಿಟ್ ಕಾರ್ಡ್ ವ್ಯವಸ್ಥೆಗೆ ಅಂತ್ಯ ಹಾಡಲು ಮುಂದಾಗಿದೆ ಎಸ್‍ ಬಿಐ!

Update: 2019-08-20 08:53 GMT

ಮುಂಬೈ, ಆ.20: ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಯೋಜನೆಯಂತೆಯೇ ಮುಂದುವರಿದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡೆಬಿಟ್ ಕಾರ್ಡ್ ವ್ಯವಸ್ಥೆಯ ಅಂತ್ಯದ ಆರಂಭವೆಂದೇ ಹೇಳಬಹುದು. ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಮಹತ್ವ ನೀಡುವುದಕ್ಕಾಗಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಡಿಜಿಟಲ್ ಕಾರ್ಡುಗಳನ್ನು ದೂರಗೊಳಿಸುವ ಉದ್ದೇಶ ಎಸ್‍ ಬಿಐಗಿದೆ ಎಂದು ಹೇಳಲಾಗಿದೆ.

ಎಸ್‍ ಬಿಐ ಗ್ರಾಹಕರು ಡೆಬಿಟ್ ಕಾರ್ಡನ್ನು ಅತಿಯಾಗಿ ಅವಲಂಬಿಸಿರುವ ಹೊರತಾಗಿಯೂ ಬ್ಯಾಂಕ್ ಇಂತಹ ಒಂದು ಯೋಜನೆ ಹೊಂದಿದೆ. “ಡೆಬಿಟ್ ಕಾರ್ಡುಗಳಿಗೆ ಅಂತ್ಯ ಹಾಡುವುದು ನಮ್ಮ ಇಚ್ಛೆ ಹಾಗೂ ಇದನ್ನು ಖಂಡಿತ ಸಾಧ್ಯವಾಗಿಸಬಹುದು ಎಂದು ನನಗೆ ತಿಳಿದಿದೆ'' ಎಂದು ವಾರ್ಷಿಕ ಫೈಬ್ಯಾಕ್ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಎಸ್‍ ಬಿಐ ಚೇರ್ಮೆನ್ ರಜನೀಶ್ ಕುಮಾರ್ ಹೇಳಿದ್ದಾರೆ.

ದೇಶದಲ್ಲಿ ಸುಮಾರು 90 ಕೋಟಿ ಡೆಬಿಟ್ ಕಾರ್ಡುಗಳು ಹಾಗೂ 3 ಕೋಟಿ ಕ್ರೆಡಿಟ್ ಕಾರ್ಡುಗಳಿವೆ ಎಂದು ತಿಳಿಸಿದ ಅವರು ‘ಯೊನೊ’ ಪ್ಲಾಟ್‍ಫಾರ್ಮ್ ನಂತಹ ಡಿಜಿಟಲ್ ಸೊಲ್ಯೂಶನ್ಸ್ ಮೂಲಕ ಡೆಬಿಟ್ ಕಾರ್ಡ್ ಮುಕ್ತ ದೇಶ ಸಾಧ್ಯ ಎಂದರು. ‘ಯೊನೊ’ ಮೂಲಕ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಬಹುದು ಅಥವಾ ಕಾರ್ಡ್ ಇಲ್ಲದೆಯೇ ವಿವಿಧೆಡೆ  ಖರೀದಿಗಳಿಗೆ ಪಾವತಿಸಬಹುದಾಗಿದೆ.

ತಮ್ಮ ಬ್ಯಾಂಕ್ ಈಗಾಗಲೇ 68,000 ಯೊನೊ ಕ್ಯಾಶ್ ಪಾಯಿಂಟ್ ಸ್ಥಾಪಿಸಿದ್ದು, ಮುಂದಿನ 18 ತಿಂಗಳುಗಳಲ್ಲಿ  ಇಂತಹ 10 ಲಕ್ಷ ಕ್ಯಾಶ್‍ ಪಾಯಿಂಟ್ ತೆರೆಯುವ ಉದ್ದೇಶವಿದೆ ಎಂದು ಅವರು  ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಜನರು ತಮ್ಮ ಕಿಸೆಗಳಲ್ಲಿ ಪ್ಲಾಸ್ಟಿಕ್ ಡೆಬಿಟ್ ಕಾರ್ಡುಗಳನ್ನು ಹೊಂದುವ ಅಗತ್ಯವಿಲ್ಲ, ವರ್ಚುವಲ್ ಕೂಪನ್ ಗಳೇ ಭವಿಷ್ಯದಲ್ಲಿ ಬಳಕೆಯಾಗಲಿವೆ ಎಂದು ಅವರು ಹೇಳಿದ್ದಾರೆ. ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News