ಉದ್ಯೋಗ ನಷ್ಟ, ಮುಚ್ಚುಗಡೆ ಭೀತಿ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ ಟೆಕ್ಸ್ ಟೈಲ್‌ ಅಸೋಸಿಯೇಶನ್‌

Update: 2019-08-20 18:21 GMT
ಫೋಟೊ: Wikimedia

ಹೊಸದಿಲ್ಲಿ, ಆ. 20: ಭಾರತದಲ್ಲಿ ಕೃಷಿಯ ಬಳಿಕ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕೈಮಗ್ಗ ಕೈಗಾರಿಕೆಯಲ್ಲಿ ಉದ್ಯೋಗಾವಕಾಶ ಕುಸಿಯುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಆಗಸ್ಟ್ 20ರಂದು ಪ್ರಕಟಿಸಿದ ಉತ್ತರ ಭಾರತ ಟೈಕ್ಸ್‌ಟೈಲ್ಸ್ ಮಿಲ್‌ಗಳ ಅಸೋಸಿಯೇಶನ್ (ಎನ್‌ಐಟಿಎಂಎ)ನ ಜಾಹೀರಾತು ಹೇಳಿದೆ.

‘ಇಂಡಿಯನ್ ಸ್ಪಿನ್ನಿಂಗ್ ಇಂಡಸ್ಟ್ರಿ ಫೇಸಿಂಗ್ ಬಿಗ್ಗೆಸ್ಟ್ ಕ್ರೆಸಿಸ್, ರಿಸಲ್ಟಿಂಗ್ ಇನ್ ಹ್ಯೂಜ್ ಜಾಬ್ ಲಾಸಸ್’ ಶೀರ್ಷಿಕೆಯ ಜಾಹೀರಾತಿನ ಮೂಲಕ ಎನ್‌ಐಟಿಎಂಎ ಮುಚ್ಚುಗಡೆ ಹಾಗೂ ಉದ್ಯೋಗ ನಷ್ಟದ ಭೀತಿ ಬಗ್ಗೆ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದೆ.

ದಿನಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಸರಕಾರದ ಗಮನ ಸೆಳೆಯಲು ಕೈಗಾರಿಕೆ ಸಂಘಟನೆಯೊಂದು ಪ್ರಯತ್ನಿಸುತ್ತಿರುವುದು ಅಪರೂಪ.

ಇದು ಅತಿ ದೊಡ್ಡ ಬಿಕ್ಕಟ್ಟು ಎಂದು ಕರೆದಿರುವ ಎನ್‌ಐಟಿಎಂಎ, ಹತ್ತಿ ಹಾಗೂ ನೂಲುವ ಗಿರಣಿಗಳಂತಹ ಕೈಗಾರಿಕಾ ಕ್ಷೇತ್ರದಲ್ಲಿ 2010-11ರಲ್ಲಿ ಕುಸಿತ ಕಂಡು ಬಂದಿತ್ತು. ಆ ವರ್ಷ ಭಾರತದ ಉತ್ಪಾದನೆ 33.2 ಲಕ್ಷ ಮೂಟೆಗೆ ಇಳಿಯಿತು ಎಂದಿದೆ.

2018ರ ಹತ್ತಿ ನೂಲಿನ ರಫ್ತು ವೌಲ್ಯಕ್ಕೆ ಹೋಲಿಸಿದರೆ, 2019 (ಎಪ್ರಿಲ್-ಜೂನ್) ರ ಹತ್ತಿ ನೂಲಿನ ರಫ್ತು ವೌಲ್ಯ ಶೇ. 34.6ಕ್ಕೆ ಇಳಿಕೆಯಾಗಿದೆ ಎಂದು ಕಮರ್ಷಿಯಲ್ ಇಂಟಲಿಜೆನ್ಸ್ ಆ್ಯಂಡ್ ಸ್ಟೆಟಿಸ್ಟಿಕ್ ಜ್ಯಾರಿ ನಿರ್ದೇಶನಾಲಯದ ಅಂಕಿ-ಅಂಶ ಉಲ್ಲೇಖಿಸಿ ಎನ್‌ಐಟಿಎಂಎ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News