ಬಳ್ಳಾರಿ ಟಸ್ಕರ್ಸ್ ಗೆ 7 ವಿಕೆಟ್‌ಗಳ ಜಯ

Update: 2019-08-20 18:43 GMT

ಬೆಂಗಳೂರು, ಆ.20: ಕೆಪಿಎಲ್ ಟ್ವೆಂಟಿ-20 ಟೂರ್ನಿಯ 8ನೇ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ವಿರುದ್ಧ ಬಳ್ಳಾರಿ ಟಸ್ಕರ್ಸ್ 7 ವಿಕೆಟ್‌ಗಳ ಜಯ ಗಳಿಸಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ರೆಡ್ಡಿ ಮತ್ತು ಕಾರ್ತಿಕ್ ಸಿ.ಎ. ಅರ್ಧಶತಕಗಳ ನೆರವಿನಲ್ಲಿ ಬಳ್ಳಾರಿ ಟಸ್ಕರ್ಸ್ ಸುಲಭದ ಗೆಲುವು ದಾಖಲಿಸಿತು. ಗೆಲುವಿಗೆ 163 ರನ್‌ಗಳ ಸವಾಲನ್ನು ಪಡೆದ ಬಳ್ಳಾರಿ ಟಸ್ಕರ್ಸ್ ತಂಡ ಇನ್ನೂ 7 ಎಸೆತಗಳು ಬಾಕಿ ಇರುವಾಗಲೆೇ 3 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತು. ಅಭಿಷೇಕ್ ರೆಡ್ಡಿ ಮತ್ತು ಕಾರ್ತಿಕ್ ಸಿ.ಎ. ಮೊದಲ ವಿಕೆಟ್‌ಗೆ 11.2 ಓವರ್‌ಗಳಲ್ಲಿ 100 ರನ್‌ಗಳ ಜೊತೆಯಾಟ ನೀಡಿದರು. ಕಾರ್ತಿಕ್ 57 ರನ್(36ಎ, 7ಬೌ, 2ಸಿ) ಗಳಿಸಿ ಸುನೀಲ್ ಎಸೆತದಲ್ಲಿ ರಾಜು ಭಟ್ಕಳ್‌ಗೆ ಕ್ಯಾಚ್ ನೀಡಿದರು.

 ಕಳೆದ ಎರಡು ಪಂದ್ಯಗಳಲ್ಲಿ ಶತಕ ದಾಖಲಿಸಿದ್ದ ದೇವ್‌ದತ್ ಪಡಿಕ್ಕಲ್ ಇಂದಿನ ಪಂದ್ಯದಲ್ಲಿ 29 ರನ್ (20ಎ, 2ಬೌ, 2ಸಿ) ಮತ್ತು ಕೃಷ್ಣಪ್ಪ ಗೌತಮ್ 6 ರನ್ ಗಳಿಸಿ ಔಟಾದರು.

ಕೊನೆಯಲ್ಲಿ ಅಭಿಷೇಕ್ ರೆಡ್ಡಿ ಅವರು ಪ್ರತೀಕ್ ಜೈನ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಬಳ್ಳಾರಿಯನ್ನು ಗೆಲುವಿನ ದಡ ಸೇರಿಸಿದರು. ಅವರು ಔಟಾಗದೆ 62 ರನ್(54ಎ, 6ಬೌ,1ಸಿ) ಗಳಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟಾಸ್ ಜಯಿಸಿದ ಬಳ್ಳಾರಿ ಟಸ್ಕರ್ಸ್ ತಂಡ ಬಿಜಾಪುರ ಬುಲ್ಸ್‌ನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಬಿಜಾಪುರ ಬುಲ್ಸ್ ತಂಡ ನಾಯಕ ಭರತ್ ಚಿಪ್ಲಿ (50) ಮತ್ತು ರಾಜು ಭಟ್ಕಳ್ (62) ಉಪಯುಕ್ತ ಕೊಡುಗೆ ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 162 ರನ್ ಗಳಿಸಿತ್ತು. /**

 ಸಂಕ್ಷಿಪ್ತ ಸ್ಕೋರ್

► ಬಿಜಾಪುರ ಬುಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 162 (ಭರತ್ ಚಿಪ್ಲಿ 50,ರಾಜು ಭಟ್ಕಳ್ 62; ಕೃಷ್ಣಪ್ಪ ಗೌತಮ್ 33ಕ್ಕೆ 3, ಪ್ರಸಿದ್ಧ್ ಕೃಷ್ಣ 17ಕ್ಕೆ 2 )

► ಬಳ್ಳಾರಿ ಟಸ್ಕರ್ಸ್ 18.5 ಓವರ್‌ಗಳಲ್ಲಿ 163/3(ಅಭಿಷೇಕ್ ರೆಡ್ಡಿ ಔಟಾಗದೆ 62, ಕಾರ್ತಿಕ್ 52, ದೇವ್‌ದತ್ತ್ ಪಡಿಕ್ಕಲ್ 29; ಸುನೀಲ್ 19ಕ್ಕೆ 1).

ಪಂದ್ಯಶ್ರೇಷ್ಠ: ಅಭಿಷೇಕ್ ರೆಡ್ಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News