10,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಅತ್ಯಂತ ದೊಡ್ಡ ಬಿಸ್ಕತ್ತು ತಯಾರಿಕಾ ಸಂಸ್ಥೆ ‘ಪಾರ್ಲೆ’!

Update: 2019-08-21 08:07 GMT

ಹೊಸದಿಲ್ಲಿ, ಆ.21: ಕುಸಿಯುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ದೇಶದ ಅತ್ಯಂತ ದೊಡ್ಡ ಬಿಸ್ಕತ್ತು ತಯಾರಿಕಾ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್  ತನ್ನ ಸುಮಾರು 10,000 ಉದ್ಯೋಗಿಗಳನ್ನು ಕೈಬಿಡುವ  ಸಾಧ್ಯತೆಯಿದೆ ಎಂದು  ‘ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಈಗಾಗಲೇ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಉದ್ಯೋಗ ನಷ್ಟ ಉಂಟಾಗಿರುವ ವರದಿಯ ಬೆನ್ನಿಗೇ ಈ ಸುದ್ದಿ ಬಂದಿದೆ. “ನಾವು ಜಿಎಸ್‍ಟಿ ಕಡಿತಗೊಳಿಸುವಂತೆ ಮನವಿ ಮಾಡಿದ್ದೇವೆ. ಆದರೆ ಸರಕಾರ ಈ ಕುರಿತಂತೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಇದ್ದರೆ 8,000ದಿಂದ 10,000 ಮಂದಿಯನ್ನು ಕೈಬಿಡದೆ ಅನ್ಯ ಉಪಾಯವಿಲ್ಲ'' ಎಂದು ಪಾರ್ಲೆ ಪ್ರಾಡಕ್ಟ್ಸ್ ಕೆಟಗರಿ ಹೆಡ್ ಮಾಯಾಂಕ್ ಶಾ ಹೇಳಿದ್ದಾರೆ.

ತನ್ನ ‘ಪಾರ್ಲೆ ಜಿ’ ಹಾಗೂ ‘ಮಾರಿ ಬ್ರ್ಯಾಂಡ್’ ಬಿಸ್ಕತ್ತುಗಳಿಗೆ ಹೆಸರುವಾಸಿಯಾಗಿರುವ ಪಾರ್ಲೆ ಪ್ರಾಡಕ್ಟ್ಸ್ ಮಾತ್ರ ಇಂತಹ  ಸಮಸ್ಯೆ ಎದುರಿಸುತ್ತಿಲ್ಲ. ಈ ಹಿಂದೆ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿ. ಆಡಳಿತ ನಿರ್ದೇಶಕ ವರುಣ್ ಬೆರ್ರಿ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿ  ಐದು ರೂಪಾಯಿಯ ಉತ್ಪನ್ನಗಳನ್ನು ಖರೀದಿಸಲೂ ಗ್ರಾಹಕರು ಹಿಂದೆ ಮುಂದೆ ನೋಡುತ್ತಿದ್ದಾರೆಂದು  ಹೇಳಿದ್ದರಲ್ಲದೆ ಆರ್ಥಿಕತೆಯಲ್ಲಿ ಏನೋ ಗಂಭೀರ ಸಮಸ್ಯೆಯಿದೆ ಎಂದೂ  ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News