ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಶ್ರೀಧರ್ ಮುಂದುವರಿಕೆ?

Update: 2019-08-21 18:12 GMT

ಮುಂಬೈ, ಆ.21: ಭಾರತೀಯ ಕ್ರಿಕೆಟ್ ತಂಡದ ಹಾಲಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮುಂದಿನ ಎರಡು ವರ್ಷಗಳ ಅವಧಿಗೆ ಮರು ಆಯ್ಕೆಯಾಗುವ ಸಾಧ್ಯತೆಯಿದೆ. ಎಂಎಸ್‌ಕೆ ಪ್ರಸಾದ್ ನೇತೃತ್ವದ ಹಿರಿಯರ ಆಯ್ಕೆ ಸಮಿತಿಯು ಸೋಮವಾರ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್ ಹುದ್ದೆಗಳಿಗೆ ಒಟ್ಟು 18 ಆಕಾಂಕ್ಷಿಗಳ ಸಂದರ್ಶನ ನಡೆಸಿತ್ತು. ಭಾರತದ ಸಹಾಯಕ ಸಿಬ್ಬಂದಿ ಆಯ್ಕೆಯ ಜವಾಬ್ದಾರಿ ಹೊತ್ತಿರುವ ಆಯ್ಕೆ ಸಮಿತಿಯು ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಶ್ರೀಧರ್, ಜಾಂಟಿ ರೋಡ್ಸ್ ಹಾಗೂ ಅಭಯ್ ಶರ್ಮಾರನ್ನು ಸಂದರ್ಶನ ನಡೆಸಿದೆ. ದಕ್ಷಿಣ ಆಫ್ರಿಕದ ಮಾಜಿ ಸ್ಟಾರ್ ಆಟಗಾರ ರೋಡ್ಸ್ ಅವರು ಸ್ಕೈಪ್ ಮೂಲಕ ಫೀಲ್ಡಿಂಗ್ ಕೋಚ್ ಸಂದರ್ಶನಕ್ಕೆ ಹಾಜರಾದರು. ಈ ಹಿಂದೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳೊಂದಿಗೆ ಕೆಲಸ ಮಾಡಿರುವ ಇಂಗ್ಲೆಂಡ್‌ನ ಜುಲಿಯನ್ ಫೌಂಟೈನ್ ಖುದ್ದಾಗಿ ಸಂದರ್ಶನಕ್ಕೆ ಹಾಜರಾದರು.

ದಕ್ಷಿಣ ಆಫ್ರಿಕದ ಓರ್ವ ಶ್ರೇಷ್ಠ ಫೀಲ್ಡರ್ ಆಗಿರುವ ರೋಡ್ಸ್ ಕಳೆದ ಕೆಲವು ವರ್ಷಗಳಿಂದ ಕೋಚ್ ಆಗಿಯೂ ಸಾಕಷ್ಟು ಅನುಭವ ಗಳಿಸಿದ್ದು, ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ.

‘‘ಜಾಂಟಿ ಹಾಗೂ ಅಭಯ್ ಅವರ ಸಾಧನೆ ಪರಿಣಾಮಕಾರಿಯಾಗಿದೆ. ಸಾಮಾನ್ಯ ವೌಲ್ಯಮಾಪನದಲ್ಲಿ ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ’’ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News