ಶೀರ್ಷಿಕೆ ಪ್ರಾಯೋಜಕತ್ವ ಹಕ್ಕನ್ನು ಉಳಿಸಿಕೊಂಡ ಪೇಟಿಎಂ

Update: 2019-08-21 18:15 GMT

ಹೊಸದಿಲ್ಲಿ, ಆ.21: ಬಿಸಿಸಿಐನ ಅಂತರ್‌ರಾಷ್ಟ್ರೀಯ ಹಾಗೂ ದೇಶಿಯ ಪಂದ್ಯಗಳ ಪ್ರಾಯೋಜಕತ್ವ ಹಕ್ಕುಗಳನ್ನು ಪೇಟಿಎಂ ತನ್ನಲ್ಲೇ ಉಳಿಸಿಕೊಂಡಿದೆ. ಪ್ರತಿ ಪಂದ್ಯಕ್ಕೆ 3.80 ಕೋ.ರೂ.ಬಿಡ್‌ನ್ನು ಅದು ಗೆದ್ದುಕೊಂಡಿದೆ.

 ಪೇಟಿಎಂನೊಂದಿಗಿನ ಒಪ್ಪಂದದ ಬಗ್ಗೆ ಬಿಸಿಸಿಐ ಬುಧವಾರ ಘೋಷಣೆ ಮಾಡಿದೆ. 2015ರಲ್ಲಿ ಪೇಟಿಎಂ ನಾಲ್ಕು ವರ್ಷಗಳ ಅವಧಿಗೆ ಹಕ್ಕನ್ನು ಜಯಿಸಿತ್ತು.

2019-2023ರ ಸ್ವದೇಶಿ ಋತುವಿಗೆ ಪೇಟಿಎಂ ಗೆದ್ದುಕೊಂಡಿರುವ ಬಿಡ್ ಮೊತ್ತ 326.80 ಕೋಟಿ ರೂ. ಪ್ರತಿ ಪಂದ್ಯಕ್ಕೆ 3.80 ಕೋ.ರೂ. ಆಗಲಿದೆ. ಕಳೆದ ಬಾರಿ ಪ್ರತಿ ಪಂದ್ಯಕ್ಕೆ 2.4 ಕೋ.ರೂ. ಇತ್ತು ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

   ‘‘ಪೇಟಿಎಂ ಸ್ವದೇಶದಲ್ಲಿ ಬಿಸಿಸಿಐನ ಶೀರ್ಷಿಕೆ ಪ್ರಾಯೋಜಕತ್ವ ಹಕ್ಕನ್ನು ಉಳಿಸಿಕೊಂಡಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಪೇಟಿಎಂ ಭಾರತದ ಹೊಸ ತಲೆಮಾರಿನ ಕಂಪೆನಿ. ಭಾರತೀಯ ಕ್ರಿಕೆಟ್‌ನೊಂದಿಗೆ ತನ್ನ ದೀರ್ಘಕಾಲದ ಬದ್ಧತೆ ಮುಂದುವರಿಸುತ್ತಿರುವ ಪೇಟಿಎಂ ಬಗ್ಗೆ ನಮಗೆ ಹೆಮ್ಮೆಯಿದೆ’’ ಎಂದು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News