ವಿನ್‌ಸ್ಟನ್ ಸಲೇಂ ಓಪನ್ ಎಟಿಪಿ ಟೂರ್ನಿ ಬೆನೊಟ್ ಪೈರ್‌ಗೆ ಶರಣಾದ ಪ್ರಜ್ಞೇಶ್ ಗುಣೇಶ್ವರನ್

Update: 2019-08-21 18:17 GMT

ನಾರ್ತ್ ಕರೋಲಿನಾ, ಆ.21: ಪ್ರಜ್ಞೇಶ್ ಗುಣೇಶ್ವರನ್ ವಿನ್‌ಸ್ಟನ್ ಸಲೇಂ ಓಪನ್ ಎಟಿಪಿ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.30ನೇ ಆಟಗಾರ ಬೆನೊಟ್ ಪೈರ್ ವಿರುದ್ಧ ಸೋಲನುಭವಿಸಿ ನಿರ್ಗಮಿಸಿದ್ದಾರೆ.

ಎಡಗೈ ಆಟಗಾರ ಪ್ರಜ್ಞೇಶ್ ಮಂಗಳವಾರ ರಾತ್ರಿ ಒಂದು ಗಂಟೆ ಹಾಗೂ 10 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಫ್ರೆಂಚ್ ಎದುರಾಳಿ ಪೈರ್ ವಿರುದ್ಧ 3-6, 5-7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಪ್ರಜ್ಞೇಶ್ ಆರಂಭದಲ್ಲೇ ಪರದಾಟ ನಡೆಸಿದ್ದು, ಪೈರ್‌ಗೆ 2-0 ಮುನ್ನಡೆ ಒದಗಿಸಿಕೊಟ್ಟಿದ್ದಾರೆ. ಆ ಬಳಿಕ 89ನೇ ರ್ಯಾಂಕಿನ ಆಟಗಾರ ಪ್ರಜ್ಞೇಶ್ ಚೇತರಿಸಿಕೊಳ್ಳಲಿಲ್ಲ. ಡಬಲ್ಸ್ ಪಂದ್ಯದಲ್ಲಿ ವೈರ್ಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಲಿಯಾಂಡರ್ ಪೇಸ್ ಹಾಗೂ ಇಸ್ರೇಲ್‌ನ ಜೋನಾಥನ್ ಎಲ್ರಿಚ್ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಪೇಸ್-ಎಲ್ರಿಚ್ ಜೋಡಿ ರಾಜೀವ್ ರಾಮ್ ಹಾಗೂ ಜೋ ಸಾಲಿಸ್‌ಬರಿಗೆ 2-6, 3-6 ಸೆಟ್‌ಗಳಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News