ಪಾಂಡಿಚೇರಿ ಕ್ರಿಕೆಟ್ ತಂಡಕ್ಕೆ ವಿಂಡೀಸ್ ದಂತಕತೆ ಕಾಳಿಚರಣ್ ಸಲಹೆಗಾರ?

Update: 2019-08-21 18:21 GMT

ಚೆನ್ನೈ, ಆ.21: ವೆಸ್ಟ್‌ಇಂಡೀಸ್‌ನ ಲೆಜೆಂಡ್ ಕ್ರಿಕೆಟಿಗ ಅಲ್ವಿನ್ ಕಾಳಿಚರಣ್ ಮುಂಬರುವ ದೇಶಿಯ ಋತುವಿನಲ್ಲಿ ಪಾಂಡಿಚೇರಿ ಕ್ರಿಕೆಟ್ ತಂಡದ ಸಲಹೆಗಾರನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಭಾರತದ ವೇಗದ ಬೌಲರ್ ಆರ್.ವಿನಯಕುಮಾರ್ ಅತಿಥಿ ಆಟಗಾರನಾಗಿ ತಂಡದಲ್ಲಿರುತ್ತಾರೆ.

ಕರ್ನಾಟಕದ ಮಾಜಿ ಬ್ಯಾಟ್ಸ್‌ಮನ್ ಜೆ.ಅರುಣ್ ಕುಮಾರ್ ಮುಖ್ಯ ಕೋಚ್ ಆಗಿಯೂ, ಡಿ. ರೋಹಿತ್ ಎಲ್ಲ ಮಾದರಿ ಕ್ರಿಕೆಟ್‌ನ ನಾಯಕನಾಗಿಯೂ ಆಯ್ಕೆಯಾಗಿದ್ದಾರೆ ಎಂದು ಪಾಂಡಿಚೇರಿ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಕಲಾತ್ಮಕ ಎಡಗೈ ಬ್ಯಾಟ್ಸ್‌ಮನ್ ಕಾಳಿಚರಣ್ ವಿಂಡೀಸ್ ಪರ 66 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳಲ್ಲಿ ಆಡಿದ್ದರು. 1975ರಲ್ಲಿ ವಿಂಡೀಸ್ ಮೊದಲ ಆವೃತ್ತಿಯ ವಿಶ್ವಕಪ್ ಜಯಿಸಿದಾಗ ಆ ತಂಡದ ಸದಸ್ಯರಾಗಿದ್ದರು.

ವಿನಯ್‌ರಲ್ಲದೆ, ತಮಿಳುನಾಡಿನ ಮಾಜಿ ಬ್ಯಾಟ್ಸ್‌ಮನ್ ಕೆಬಿ ಅರುಣ್ ಕಾರ್ತಿಕ್ ಹಾಗೂ ಹಿಮಾಚಪ್ರದೇಶದ ಪರಾಸ್ ಡೊಗ್ರಾ ಗೆಸ್ಟ್ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ವಿನಯ್ ಭಾರತದ ಪರ 1 ಟೆಸ್ಟ್, 31 ಏಕದಿನ ಹಾಗೂ 9 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಕರ್ನಾಟಕ ತಂಡ 2013-14 ಹಾಗೂ 2014-15ರಲ್ಲಿ ರಣಜಿ ಟ್ರೋಫಿ ಜಯಿಸಿದಾಗ ನಾಯಕನಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News