ಅಮೆರಿಕದ ಸರೋವರದಲ್ಲಿ ಭಾರತೀಯ ವಿದ್ಯಾರ್ಥಿ ಮುಳುಗಿ ಸಾವು

Update: 2019-08-21 18:37 GMT

ವಾಶಿಂಗ್ಟನ್, ಆ. 21: ಅಮೆರಿಕದ ಒರೆಗಾನ್ ರಾಜ್ಯದಲ್ಲಿರುವ ಕ್ರೇಟರ್ ಸರೋವರದಲ್ಲಿ 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ಮುಳುಗಿ ಮೃತಪಟ್ಟಿದ್ದಾರೆ.

 ಆಂಧ್ರಪ್ರದೇಶದ ವಿಶಾಖಪಟ್ಟಣದ ನಿವಾಸಿಯಾಗಿರುವ ಸುಮೇದ್ ಮನ್ನಾರ್ ಸರೋವರದ ದಡದಲ್ಲಿರುವ ಮನರಂಜನಾ ತಾಣ ‘ಜಂಪಿಂಗ್ ರಾಕ್’ನಿಂದ ರವಿವಾರ ಸಂಜೆ ಸರೋವರಕ್ಕೆ ಹಾರಿದವರು ಮೇಲೆ ಬಂದಿಲ್ಲ ಎಂದು ಕ್ರೇಟರ್ ಲೇಕ್ ನ್ಯಾಶನಲ್ ಪಾರ್ಕ್‌ನ ವಕ್ತಾರೆ ಮಾರ್ಶಾ ಮೆಕೇಬ್ ತಿಳಿಸಿರುವುದಾಗಿ ‘ಒರೆಗಾನಿಯನ್’ ಪತ್ರಿಕೆ ವರದಿ ಮಾಡಿದೆ.

ಒರೆಗಾನ್ ಸ್ಟೇಟ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಮನ್ನಾರ್ ಸುಮಾರು 25 ಅಡಿ ಎತ್ತರದ ಕಮರಿಯಿಂದ ನೀರಿಗೆ ಹಾರಿದರು ಎಂದು ಮೆಕೇಬ್ ತಿಳಿಸಿದರು.

ಸ್ಥಳದಲ್ಲಿದ್ದವರು ನೀರಿಗೆ ಲೈಫ್ ರಿಂಗ್‌ಗಳನ್ನು ಎಸೆದರು ಹಾಗೂ ಕ್ರೇಟರ್ ಲೇಕ್ ಸಿಬ್ಬಂದಿ ನದಿಯಲ್ಲಿ ಹುಡುಕಾಡಿದರೂ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News