ಬಿಹಾರ ಮಾಜಿ ಸಿಎಂ ಅಂತ್ಯಕ್ರಿಯೆ ವೇಳೆ ಗನ್ ಸೆಲ್ಯೂಟ್ ನೀಡಲು ವಿಫಲವಾದ ಎಲ್ಲಾ 22 ರೈಫಲ್ ಗಳು

Update: 2019-08-22 09:20 GMT
Photo: ANI

ಸುಪೌಲ್: ಆಗಸ್ಟ್ 19ರಂದು ನಿಧನರಾದ ಬಿಹಾರದ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ (82) ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದಿಂದ  ಬುಧವಾರ ನಡೆಯುವ  ವೇಳೆ  ಅವರಿಗೆ ಗನ್ ಸೆಲ್ಯೂಟ್ ನೀಡಲು ಅಲ್ಲಿದ್ದ ಪೊಲೀಸರ ಬಳಿಯಿದ್ದ 22 ರೈಫಲ್ ಗಳಲ್ಲಿ ಯಾವೊಂದು ರೈಫಲ್ ನಿಂದ ಕೂಡ ಗುಂಡು ಸಿಡಿಸಲು  ಅಸಾಧ್ಯವಾಗಿ ಮುಜುಗರ ಸೃಷ್ಟಿಸಿದ ಘಟನೆ ನಡೆದಿದೆ.

ಮಿಶ್ರಾ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಸುಪೌಲ್ ಎಂಬಲ್ಲಿ ನಡೆದಿದ್ದು ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ರಾಜ್ಯದ ಆರೋಗ್ಯ ಸಚಿವ ಮಂಗಲ್ ಪಾಂಡೆ ಹಾಜರಿದ್ದರು.

ಹಾಜರಿದ್ದ ಗಣ್ಯರೆದುರು ಮಾಜಿ ಸಿಎಂಗೆ ಗನ್ ಸೆಲ್ಯೂಟ್ ನೀಡಲು ವಿಫಲವಾಗುತ್ತಲೇ ಪೊಲೀಸರು ತಮ್ಮ ಕೈಯ್ಯಲ್ಲಿದ್ದ ಬಂದೂಕುಗಳನ್ನು ಪರಿಶೀಲಿಸುತ್ತಿರುವುದು ಕಂಡು ಬಂತು.

ಈ ಘಟನೆ ಮಾಜಿ ಸಿಎಂಗೆ ಮಾಡಿದ ಅವಮಾನ, ಘಟನೆ ಕುರಿತಂತೆ ತನಿಖೆ ನಡೆಸಬೇಕು ಎಂದು ಆರ್ ಜೆ ಡಿ ಶಾಸಕ ಪಿಪ್ರಾ ಯದುವಂಶ್ ಕುಮಾರ್ ಯಾದವ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News