ಅಮೆರಿಕೇತರ ದಂಪತಿಗಳ ಮಕ್ಕಳ ಜನ್ಮದತ್ತ ಪೌರತ್ವ ಕೊನೆಗೊಳಿಸಲು ಗಂಭೀರ ಚಿಂತನೆ: ಟ್ರಂಪ್

Update: 2019-08-22 15:16 GMT

ವಾಶಿಂಗ್ಟನ್, ಆ. 22: ಅಮೆರಿಕದ ನಾಗರಿಕರಲ್ಲದವರಿಗೆ ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಪೌರತ್ವ ನೀಡುವುದನ್ನು ಕೊನೆಗೊಳಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

‘‘ಜನ್ಮದತ್ತ ಪೌರತ್ವದ ಬಗ್ಗೆ ನಾವು ಗಂಭೀರವಾಗಿ ಯೋಚಿಸುತ್ತಿದ್ದೇವೆ. ಅದು ಸ್ಪಷ್ಟವಾಗಿ ಹಾಸ್ಯಾಸ್ಪದವಾಗಿದೆ’’ ಎಂದು ಜನ್ಮಸಿದ್ಧ ಪೌರತ್ವದ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಅಮೆರಿಕದ ಈ ನಿಯಮದ ಪ್ರಕಾರ, ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಆ ದೇಶದ ಪೌರತ್ವ ತನ್ನಿಂತಾನೆ ಲಭಿಸುತ್ತದೆ.

‘‘ಜನ್ಮಸಿದ್ಧ ಪೌರತ್ವ.. ನೀವು ಗಡಿ ದಾಟಿ ಅಮೆರಿಕಕ್ಕೆ ಬರುತ್ತೀರಿ. ಮಗುವಿಗೆ ಜನ್ಮ ನೀಡುತ್ತೀರಿ. ಅಭಿನಂದನೆಗಳು... ಆ ಮಗು ಈಗ ಅಮೆರಿಕದ ಪ್ರಜೆ. ಆದರೆ, ಇದನ್ನು ನಾವು ಈಗ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ’’ ಎಂದು ಟ್ರಂಪ್ ನುಡಿದರು.

ಜನ್ಮಸಿದ್ಧ ಪೌರತ್ವವನ್ನು ರದ್ದುಪಡಿಸುವುದಾಗಿ 2016ರ ಚುನಾವಣಾ ಪ್ರಚಾರ ಅಭಿಯಾನದ ವೇಳೆ ಟ್ರಂಪ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News