ಬಾಗಿಲು ತೆರೆದೇ ಓಡಿದ ಜಪಾನ್‌ನ ಬುಲೆಟ್ ರೈಲು

Update: 2019-08-22 17:54 GMT

ಟೋಕಿಯೊ, ಆ. 22: ಜಪಾನ್‌ನ ಬುಲೆಟ್ ರೈಲೊಂದು ಬುಧವಾರ ಗಂಟೆಗೆ 280 ಕಿ.ಮೀ. ವೇಗದಲ್ಲಿ ಓಡುತ್ತಿದ್ದಾಗ ಅದರ ಬಾಗಿಲೊಂದು ಸುಮಾರು ಒಂದು ನಿಮಿಷ ತೆರೆದೇ ಇತ್ತು ಎಂದು ರೈಲಿನ ಆಡಳಿತ ತಿಳಿಸಿದೆ.

 ಜಪಾನ್‌ನ ‘ಶಿಂಕನ್‌ಸೆನ್’ ಬುಲೆಟ್ ರೈಲಿನಲ್ಲಿ ಜಾಗತಿಕ ದರ್ಜೆಯ ಸುರಕ್ಷಾ ಉಪಕ್ರಮಗಳಿದ್ದು, ಇಂಥ ಲೋಪಗಳು ನಡೆಯುವುದು ತೀರಾ ಅಪರೂಪವಾಗಿದೆ. ಇದು ಮಾನವ ವೈಫಲ್ಯವಾಗಿದೆ.

ಈಶಾನ್ಯ ಜಪಾನ್‌ನ ಸೆಂಡೈ ನಿಲ್ದಾಣದಿಂದ ಟೋಕಿಯೋಗೆ ರೈಲು ಹೊರಟ ಬಳಿಕ, ಒಂಬತ್ತನೇ ಬೋಗಿಯ ಬಾಗಿಲು ತೆರೆದೇ ಇರುವುದನ್ನು ಸೂಚಿಸುವ ಎಚ್ಚರಿಕೆ ದೀಪ ಉರಿಯುತ್ತಿರುವುದನ್ನು ಕಂಡಕ್ಟರ್ ಗಮನಿಸಿದರು. ರೈಲು ಕೂಡಲೇ ಸುರಂಗವೊಂದರಲ್ಲಿ ತುರ್ತಾಗಿ ನಿಂತಿತು ಎಂದು ಈಸ್ಟ್ ಜಪಾನ್ ರೈಲ್ವೇ ತಿಳಿಸಿದೆ.

 ‘‘ಸುಮಾರು 340 ಜನರು ಆ ಸಂದರ್ಭದಲ್ಲಿ ರೈಲಿನಲ್ಲಿದ್ದರು. ಆದರೆ, ಯಾರೂ ಗಾಯಗೊಂಡಿಲ್ಲ’’ ಕಂಪೆನಿಯ ವಕ್ತಾರರೊಬ್ಬರು ತಿಳಿಸಿದರು. ತಪಾಸಣೆಯ ಬಳಿಕ ರೈಲು ಮುಂದುವರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News