ಚೀನಾ ಜೊತೆ ವ್ಯಾಪಾರ ಸಮರಕ್ಕೆ ನನ್ನನ್ನು ಆರಿಸಲಾಗಿದೆ: ಟ್ರಂಪ್

Update: 2019-08-22 17:58 GMT

ವಾಶಿಂಗ್ಟನ್, ಆ. 22: ಚೀನಾದೊಂದಿಗೆ ವ್ಯಾಪಾರ ಸಮರ ನಡೆಸಲು ನನ್ನನ್ನು ಆಯ್ಕೆ ಮಾಡಲಾಗಿದೆ ಹಾಗೂ ನಾನು ಇದರಲ್ಲಿ ಗೆಲ್ಲುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

‘‘ಇದು ತುಂಬಾ ಸಮಯದ ಹಿಂದೆಯೇ ನಡೆಯಬೇಕಾಗಿದ್ದ ವ್ಯಾಪಾರ ಸಮರವಾಗಿದೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು. ‘‘ಇದನ್ನು ಯಾರಾದರೂ ಮಾಡಬೇಕಾಗಿತ್ತು. ಅದಕ್ಕಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ’’ ಎಂದರು.

ಚೀನಾದ ಸರಕುಗಳ ಮೇಲೆ ಅಮೆರಿಕ ಆಮದು ತೆರಿಗೆ ವಿಧಿಸಿರುವುದು ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಏರ್ಪಟ್ಟ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಚೀನಾ ಹೇಳಿದೆ. ಇದರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅದು ಹೇಳಿದೆ.

ಚೀನಾದ ಇನ್ನೂ 300 ಬಿಲಿಯ ಡಾಲರ್ ಸರಕುಗಳ ಮೇಲೆ ತಾನು ತೆರಿಗೆ ವಿಧಿಸುವುದಾಗಿ ಟ್ರಂಪ್ ಘೋಷಿಸಿದ ಬಳಿಕ ಚೀನಾ ಮತ್ತು ಅಮೆರಿಕಗಳ ನಡುವಿನ ಉದ್ವಿಗ್ನತೆ ಈ ತಿಂಗಳು ಮತ್ತೆ ತಾರಕಕ್ಕೇರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕದ ಕೃಷಿ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ ಹಾಗೂ ತನ್ನ ಕರೆನ್ಸಿ ಯುವಾನನ್ನು ದುರ್ಬಲಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News