ಸಾವರ್ಕರ್: ಹಿಂದುತ್ವದ ಪಿತಾಮಹನ ನೈಜ ಕಥಾನಕ

Update: 2019-08-22 18:34 GMT

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಸಾವರ್ಕರ್ ಗೋವಿನ ಕಾಳಜಿವಹಿಸುವುದನ್ನು ಬೆಂಬಲಿಸಿದ್ದರು. ಆದರೆ ಗೋಪೂಜೆಯನ್ನಲ್ಲ ಮತ್ತು ಅದರ ಮೂತ್ರವನ್ನು, ಕೆಲವೊಂದು ಕಡೆ ಸೆಗಣಿಯ ಸೇವನೆಯ ಕಲ್ಪನೆಯನ್ನೂ ವಿರೋಧಿಸಿದ್ದರು. ಅವರ ಪ್ರಕಾರ, ಇಂತಹ ಪದ್ಧತಿಗಳನ್ನು ಪ್ರಾಚೀನ ಭಾರತದಲ್ಲಿ ವ್ಯಕ್ತಿಯೊಬ್ಬನ ಪಾಪಕ್ಕೆ ದಂಡದ ರೂಪದಲ್ಲಿ ನೀಡಲಾಗುತ್ತಿರಬಹುದು. ತನ್ನ ಲೇಖನವನ್ನು ಧರ್ಮನಿಂದನೆ ಎಂದು ಆರೋಪಿಸುವ ಸಾಂಪ್ರದಾಯಿಕ ಹಿಂದೂಗಳಿಗೂ ಸಾವರ್ಕರ್ ಉತ್ತರವನ್ನು ಸಿದ್ಧಪಡಿಸಿದ್ದರು: ‘‘ನೀವು ಮಾಡುತ್ತಿರುವ ಧರ್ಮನಿಂದನೆ ಎಲ್ಲದಕ್ಕಿಂತಲೂ ದೊಡ್ಡದಾಗಿದೆ. ಯಾವ ರೀತಿ ನೀವು 33 ಕೋಟಿ ದೇವರುಗಳನ್ನು ಗೋವಿನ ಹೊಟ್ಟೆಯಲ್ಲಿ ತುಂಬಿಸಿದ್ದೀರಿ ನೋಡಿ’’ ಎಂದವರು ಬರೆದಿದ್ದರು.

ಹಿಂದೂ-ಮುಸ್ಲಿಂ ಸಂಘರ್ಷದ ಸಂಕೀರ್ಣ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಇಬ್ಬರು ನಾಯಕರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ಹಿಂದೂ ಸಮಾಜವನ್ನು ಯಾವ ರೀತಿ ಮುಂದಕ್ಕೆ ಕೊಂಡೊಯ್ಯಬೇಕು ಎನ್ನುವ ವಿಷಯದಲ್ಲಿ ಈ ಅಂತರ ಮತ್ತಷ್ಟು ಹೆಚ್ಚಿತ್ತು. ಗಾಂಧೀಜಿಯ ಗಂಟೆಗಳ ಕಾಲ ಚರಕ ಸುತ್ತುವಿಕೆ, ಸಸ್ಯಾಹಾರವಾದದ ಕಟ್ಟುನಿಟ್ಟಿನ ಪಾಲನೆ ಮತ್ತು ಮಾನವನ ಆರೋಗ್ಯಕ್ಕೆ ದನದ ಹಾಲು ಉತ್ತಮವೋ ಅಥವಾ ಆಡಿನ ಹಾಲೋ ಎಂಬ ಬಗ್ಗೆ ಚರ್ಚೆ ಇತ್ಯಾದಿ ದೈನಂದಿನ ನಿಯಮಗಳನ್ನು ಸಾವರ್ಕರ್ ಟೀಕಿಸುತ್ತಿದ್ದರು. (ಇವುಗಳಲ್ಲಿ ಕೆಲವೊಂದು ನಿಯಮಗಳು ಗಾಂಧೀಜಿಯವರ ಆಶ್ರಮವಾಸಿಗಳಿಗಾಗಿ ರೂಪಿಸಲಾಗಿತ್ತೇ ಹೊರತು ಅವರ ಹೊರಗಿನ ಅನುಯಾಯಿಗಳಿಗಾಗಲೀ ಅಥವಾ ಸಾರ್ವಜನಿಕರಿಗಾಗಲೀ ಅಲ್ಲ).

ಈ ವಿಷಯಗಳು ನೈತಿಕ ವೌಲ್ಯ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿದಿದ್ದ ಸಾವರ್ಕರ್ ಪಾಲಿಗೆ ಇವುಗಳು ವಿಷಯಗಳೇ ಆಗಿರಲಿಲ್ಲ. ಅವುಗಳ ಒಂದೇ ಪರಿಣಾಮವೆಂದರೆ, ಜನರ ಶಕ್ತಿಯನ್ನು ಕುಂದಿಸುವುದು ಮತ್ತು ಸಾರ್ವಜನಿಕ ಚರ್ಚೆಯ ದಿಕ್ಕನ್ನು ತಪ್ಪುದಾರಿಗೆ ಬದಲಿಸುವುದು.

ಅದಕ್ಕಿಂತ ಹೆಚ್ಚು ಮುಖ್ಯ ವಿಷಯವೆಂದರೆ ಧೈರ್ಯ ಎಂದು ಸಾರ್ವರ್ಕರ್ ತಿಳಿಸಿದ್ದರು. ದಾಳಿಕೋರರು, ದಬ್ಬಾಳಿಕೆ ನಡೆಸುವವರು ಮತ್ತು ಲೂಟಿಕೋರರನ್ನು ಹಿಮ್ಮೆಟ್ಟಿಸುವಂತಹ ಸ್ವರಕ್ಷಣೆಯ ಸಂದರ್ಭದಲ್ಲೂ ಶಕ್ತಿಯ ಬಳಕೆಯನ್ನು ನಿರಾಕರಿಸುವ ಮಹಾತ್ಮಾ ಗಾಂಧಿಯ ಸಂಪೂರ್ಣ ಅಹಿಂಸಾ ತತ್ವದಿಂದಾಗಿ ಭಾರತದ ಕ್ಷತ್ರಿಯ ಸ್ಫೂರ್ತಿ ಅವಸಾನಗೊಳ್ಳುವ ಅಪಾಯವಿದೆ ಎಂದು ಅವರು ತಿಳಿಸಿದ್ದರು.

ಆದರೆ ಸಾವರ್ಕರ್ ಅವರ ವ್ಯಕ್ತಿತ್ವವೂ ಗಾಂಧೀಜಿಯವರಷ್ಟೇ ಸಂಕೀರ್ಣವಾಗಿತ್ತು. ನಿಷ್ಠೆಯ ಹಿಂದೂವಾಗಿದ್ದ ಗಾಂಧೀಜಿ ಪ್ರಾರ್ಥನೆ, ಆಚರಣೆಗಳಲ್ಲಿ ಪ್ರಾಮಾಣಿಕ ನಂಬಿಕೆ ಇರಿಸಿದ್ದರು ಮತ್ತು ಸಂಪ್ರದಾಯ ಹಾಗೂ ಧಾರ್ಮಿಕ ನುಡಿಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಬಳಸುತ್ತಿದ್ದರು. ರಾಮರಾಜ್ಯದ ನಿರ್ಮಾಣ ಅವರ ಕನಸಾಗಿತ್ತು ಮತ್ತು ಬಹುತೇಕ ಹಿಂದೂಗಳಿಗೆ ಪಾವಿತ್ರದ ಸಂಕೇತವಾದ ಗೋವುಗಳ ರಕ್ಷಣೆ ಒಂದು ಪವಿತ್ರ ಕರ್ತವ್ಯ ಎಂದು ಭಾವಿಸಿದ್ದರು.

ಅವೆಲ್ಲದಕ್ಕೂ ಮತ್ತು ಅವರ ಹಳ್ಳಿ ಜೀವನದ ವೈಭವೀಕರಣ, ಆಧುನಿಕ ಯಂತ್ರಗಳ ತಿರಸ್ಕಾರ ಮತ್ತು ನಾಲ್ಕು ಜಾತಿಗಳ ವ್ಯವಸ್ಥೆ-ವರ್ಣಾಶ್ರಮವನ್ನು ಖಂಡಿಸುವಲ್ಲಿ ಅವರ ಉದಾಸೀನತೆಯಿಂದಾಗಿ ಅವರು ಶುದ್ಧಿ ಮತ್ತು ಮರುಮತಾಂತರವನ್ನು ಕಟುವಾಗಿ ವಿರೋಧಿಸುತ್ತಿದ್ದರು.

ಇನ್ನೊಂದೆಡೆ, ಇದಕ್ಕೆ ವಿರುದ್ಧವೆಂಬಂತೆ ಸಾವರ್ಕರ್ ಧಾರ್ಮಿಕ ನೆಲೆಯಲ್ಲಿ ಸಾಮಾನ್ಯ ಆಚರಣೆಯ ಹಿಂದೂವಾಗಿದ್ದರು. ಅವರು ಸಂಪ್ರದಾಯ ಪದ್ಧತಿಗಳನ್ನು ಪಾಲಿಸುತ್ತಿರಲಿಲ್ಲ ಮತ್ತು ಒಂದು ವೇಳೆ ದೇವರು ಇದ್ದರೆ ಅವರು ಪ್ರಾರ್ಥನೆಗೆ ಪ್ರತಿಕ್ರಿಯಿಸುವ ಹವ್ಯಾಸವನ್ನು ಹೊಂದಿರಲಿಕ್ಕಿಲ್ಲ ಎಂದು ಭಾವಿಸಿದ್ದರು.

ಅವರು ಜಾತಿ ವ್ಯವಸ್ಥೆಯನ್ನು ಸಂಪೂರ್ಣ ನಾಶ ಮಾಡುವ ಆಮೂಲಕ ಹಿಂದೂ ಸಂಘಟನೆ ಅಥವಾ ಒಗ್ಗಟ್ಟಿನ ಉದ್ದೇಶ ಸಾಧಿಸಲು ಯೋಚಿಸಿದ್ದರು. ಅವರು ರತ್ನಗಿರಿಯ ಕರಾವಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿದ್ದ ಮೀನುಗಳನ್ನು ಪ್ರೀತಿಸುತ್ತಿದ್ದರು ಮತ್ತು ಮಾಂಸಾಹಾರ ಸೇವಿಸುವವರನ್ನು ಪ್ರಶ್ನಾರ್ಥವಾಗಿ ಕಾಣುತ್ತಿದ್ದ ಬ್ರಾಹ್ಮಣರನ್ನು ಇಷ್ಟಪಡುತ್ತಿರಲಿಲ್ಲ. ತಾವು ಬೆಳೆಸಿಕೊಂಡು ಬಂದಿರುವ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದ್ದರೂ ಸರಿ ಹಿಂದೂಗಳು ಮತ್ತು ಒಟ್ಟಿನಲ್ಲಿ ಭಾರತೀಯರು ನಗರ ಜೀವನ ಮತ್ತು ಆಧುನಿಕ ವೈಜ್ಞಾನಿಕ ಪ್ರಗತಿಯನ್ನು ಅಪ್ಪಿಕೊಳ್ಳಬೇಕು ಎನ್ನುವುದು ಸಾವರ್ಕರ್ ಇರಾದೆಯಾಗಿತ್ತು. ಅದೇ ಸಮಯದಲ್ಲಿ, ಇಸ್ಲಾಮಿಕ್ ದಾಳಿಯೆಂದು ತಾನು ಭಾವಿಸಿದ್ದ ಅತಿಕ್ರಮಣದಿಂದ ಹಿಂದೂ ಸಮಾಜ ತನ್ನ ಗುರುತು ಮತ್ತು ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಶುದ್ಧಿ ಅಭಿಯಾನಕ್ಕೆ ಪರ್ಯಾಯ ಮತ್ತೊಂದಿಲ್ಲ ಎಂದು ಸಾವರ್ಕರ್ ದೃಢವಾಗಿ ನಂಬಿದ್ದರು.

ಗೋವಿನ ವಿಷಯಕ್ಕೆ ಸಂಬಂಧಿಸಿದಂತೆ ಸಾವರ್ಕರ್, ಕೇವಲ ಗಾಂಧೀಜಿ ಮಾತ್ರವಲ್ಲ ತನ್ನ ಬಹುತೇಕ ಸಹಧರ್ಮೀಯರ ಜೊತೆ ವಿರೋಧ ಹೊಂದಿದ್ದರು. ಸಾವರ್ಕರ್ ರತ್ನಗಿರಿಯಲ್ಲಿ ಒತ್ತಾಯವಾಗಿ ತಂಗಿದ್ದ ಸಮಯದಲ್ಲಿ ಮರಾಠಿ ದೈನಿಕ ಭಾಲಾದಲ್ಲಿ ಒಂದು ಲೇಖನವನ್ನು ಕಂಡರು. ಅದರಲ್ಲಿ ಸಂಪಾದಕರು, ‘‘ಹಿಂದೂ ಎಂದರೆ ಯಾರು?’’ ಎಂದು ಪ್ರಶ್ನಿಸಿ ಅದಕ್ಕೆ ತಾವೇ ಉತ್ತರಿಸುತ್ತಾ, ‘‘ಗೋವನ್ನು ತನ್ನ ತಾಯಿಯೆಂದು ಭಾವಿಸುವವನೇ ಹಿಂದೂ’’ ಎಂದು ಘೋಷಿಸಿದ್ದರು. ಇದಕ್ಕೆ ಉತ್ತರಿಸಲೇಬೇಕು ಎಂದು ಯೋಚಿಸಿದ ಸಾವರ್ಕರ್, ‘‘ಗೋವು ಯಾರಿಗಾದರೂ ತಾಯಿಯಾಗಿದ್ದರೆ ಅದು ಎತ್ತಿಗೆ ಮಾತ್ರ’’ ಎಂದು ಮರಾಠಿ ಪಾಕ್ಷಿಕ ‘ಕಿರ್ಲೋಸ್ಕರ್’ಗೆ ಬರೆದ ಲೇಖನದಲ್ಲಿ ಪ್ರತಿಕ್ರಿಯಿಸಿದರು. ‘‘ಹಿಂದುತ್ವವು ಗೋವಿನ ಕಾಲುಗಳಲ್ಲಿ ಆಶ್ರಯ ಪಡೆದರೆ ಕೇವಲ ಒಂದು ಸಣ್ಣ ಅಲುಗಾಟ ಉಂಟಾದರೂ ನೆಲಕ್ಕುರುಳಲಿದೆ’’ ಎಂದು ಅವರು ಬರೆದಿದ್ದರು.

‘‘ಗೋವು ಒಂದು ಅತ್ಯಂತ ಉಪಯುಕ್ತ ಪ್ರಾಣಿ. ಆದರೆ ಅದನ್ನು ಪೂಜಿಸುವುದಕ್ಕೆ ಮಾತ್ರ ಅರ್ಥವಿಲ್ಲ. ಮನುಷ್ಯ ಅತಿಮಾನುಷ ಗುಣಗಳನ್ನು ಹೊಂದಿರುವವರನ್ನು ದೇವರೆಂದು ಪರಿಗಣಿಸಬಹುದು. ಆದರೆ ಮಾನವನಿಗಿಂತ ಕೀಳಾಗಿರುವ ಪ್ರಾಣಿಯನ್ನಲ್ಲ’’ ಎಂದು ಅವರು ಅಭಿಪ್ರಾಯಿಸಿದ್ದರು.

ಇದು ಗೋಪೂಜನೆ ಎಂಬ ಮುಗ್ಧ ಆಚರಣೆಯನ್ನು ಬಿಡಲು ಸಕಾಲ. ಯಾಕೆಂದರೆ ಇದು ಬುದ್ಧಿ ಹತ್ಯೆಗಿಂತ ಕಡಿಮೆಯೇನೂ ಅಲ್ಲ ಎಂದು ಸಾವರ್ಕರ್ ತಿಳಿಸಿದ್ದರು. ಅವರು ಗೋವುಗಳ ಸಾಕಣೆಯನ್ನು ವಿರೋಧಿಸಿರಲಿಲ್ಲ ಮತ್ತು ಗೋಸಾಕಣೆಯನ್ನು ಒಂದು ರಾಷ್ಟ್ರೀಯ ಕರ್ತವ್ಯ ಎಂದು ಪ್ರೋತ್ಸಾಹಿಸಿದ್ದರು. ಆದರೆ ಅದರಿಂದ ಹೆಚ್ಚಿನ ಆರ್ಥಿಕ ಮತ್ತು ವೈಜ್ಞಾನಿಕ ಲಾಭಗಳು ಸಿಗುವವರೆಗೆ ಮಾತ್ರ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಸಾವರ್ಕರ್ ಗೋವಿನ ಕಾಳಜಿವಹಿಸುವುದನ್ನು ಬೆಂಬಲಿಸಿದ್ದರು. ಆದರೆ ಗೋಪೂಜೆಯನ್ನಲ್ಲ ಮತ್ತು ಅದರ ಮೂತ್ರವನ್ನು, ಕೆಲವೊಂದು ಕಡೆ ಸೆಗಣಿಯ ಸೇವನೆಯ ಕಲ್ಪನೆಯನ್ನೂ ವಿರೋಧಿಸಿದ್ದರು. ಅವರ ಪ್ರಕಾರ, ಇಂತಹ ಪದ್ಧತಿಗಳನ್ನು ಪ್ರಾಚೀನ ಭಾರತದಲ್ಲಿ ವ್ಯಕ್ತಿಯೊಬ್ಬನ ಪಾಪಕ್ಕೆ ದಂಡದ ರೂಪದಲ್ಲಿ ನೀಡಲಾಗುತ್ತಿರಬಹುದು. ತನ್ನ ಲೇಖನವನ್ನು ಧರ್ಮನಿಂದನೆ ಎಂದು ಆರೋಪಿಸುವ ಸಾಂಪ್ರದಾಯಿಕ ಹಿಂದೂಗಳಿಗೂ ಸಾವರ್ಕರ್ ಉತ್ತರವನ್ನು ಸಿದ್ಧಪಡಿಸಿದ್ದರು: ‘‘ನೀವು ಮಾಡುತ್ತಿರುವ ಧರ್ಮನಿಂದನೆ ಎಲ್ಲದಕ್ಕಿಂತಲೂ ದೊಡ್ಡದಾಗಿದೆ. ಯಾವ ರೀತಿ ನೀವು 33 ಕೋಟಿ ದೇವರುಗಳನ್ನು ಗೋವಿನ ಹೊಟ್ಟೆಯಲ್ಲಿ ತುಂಬಿಸಿದ್ದೀರಿ ನೋಡಿ’’ ಎಂದವರು ಬರೆದಿದ್ದರು.

ಈ ದೃಷ್ಟಿಕೋನ ಪ್ರಯೋಜನಕಾರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲದಿದ್ದರೂ ಅದನ್ನು ಹಿಂದುತ್ವದ ಸಿದ್ಧಾಂತದಿಂದ ಹೊರತಾಗಿಸುವಂತಿಲ್ಲ. ವಾಸ್ತವದಲ್ಲಿ ಹಿಂದುತ್ವ ಅದರ ಮೂಲದಲ್ಲೇ ಇದೆ. ನೆಹರೂ ಅವರು ಭಾರತದ ಸಂಯುಕ್ತ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದರೆ ಸಾವರ್ಕರ್, ಭಾರತವು ಕೇವಲ ಬ್ರಿಟಿಷರಿಂದ ಮಾತ್ರ ಒತ್ತುವರಿಗೊಳಪಟ್ಟಿರಲಿಲ್ಲ ಎಂದು ನಂಬಿದ್ದರು. ಹಲವು ಶತಮಾನಗಳ ಇಸ್ಲಾಮಿಕ್ ಆಳ್ವಿಕೆಯನ್ನೂ ಅವರು ಬಂಧನ, ಒತ್ತುವರಿ, ದಬ್ಬಾಳಿಕೆ ಮತ್ತು ಗುಲಾಮಗಿರಿಯ ಯುಗ ಎಂದು ಭಾವಿಸಿದ್ದರು. ಗೋಪೂಜನೆಯಲ್ಲಿ ಅವರಿಗಿದ್ದ ಬಹುದೊಡ್ಡ ಸಮಸ್ಯೆಯೆಂದರೆ ಹಿಂದೆ ಅನೇಕ ಹಿಂದೂಗಳ ಸೋಲಿಗೆ ಅದು ಕಾರಣವಾಗಿತ್ತು. ಸಾವರ್ಕರ್ ಪ್ರಕಾರ, ಹಿಂದೂಗಳ ವಿರುದ್ಧದ ಯುದ್ಧಗಳಲ್ಲಿ ಮುಸ್ಲಿಮ್ ಸೇನೆಗಳು ಹಲವು ಬಾರಿ ಗೋವುಗಳನ್ನು ರಕ್ಷಾಕವಚಗಳಾಗಿ ಬಳಸಿಕೊಂಡಿವೆ.

ಇದಕ್ಕೆ ಅವರು ಎರಡು ಉದಾಹರಣೆಗಳನ್ನು ನೀಡುತ್ತಾರೆ, ಮುಲ್ತಾನ್‌ನತ್ತ ನಡಿಗೆ ಮತ್ತು ಕಾಶಿಯನ್ನು ಮುಕ್ತಗೊಳಿಸುವ ಮರಾಠ ದೊರೆ ಮಲ್ಹರೊ ಹೋಲ್ಕರ್‌ನ 18ನೇ ಶತಮಾನದ ಅಭಿಯಾನ. ಈ ಎರಡು ಸಂದರ್ಭಗಳಲ್ಲಿ ಗೋಹತ್ಯೆ ನಡೆಸಿದ ಪಾಪ ತಟ್ಟುತ್ತದೆ ಎಂಬ ಭಯದಿಂದ ಕೊನೆಯ ಕ್ಷಣದಲ್ಲಿ ಹಿಂದೂಗಳು ಹಿಂದೆ ಸರಿಯದೆ ಬೇರೆಯದ್ದೇ ದಾರಿಯನ್ನು ಹುಡುಕುವ ಅಗತ್ಯವಿತ್ತು ಎಂದು ಸಾವರ್ಕರ್ ಅಭಿಪ್ರಾಯಿಸುತ್ತಾರೆ.

ಒಂದು ವೇಳೆ ಹಿಂದೂ ರಾಷ್ಟ್ರವನ್ನು ಹಿಂದೂಯೇತರ ಶಕ್ತಿಗಳು ಸುತ್ತುವರಿದರೆ ಮತ್ತು ದಂಗೆಯನ್ನು ತೆರವುಗೊಳಿಸಲು ಹಾಗೂ ಆಹಾರ ಪಡೆಯಲು ಬೇರೆ ದಾರಿಯಿಲ್ಲದಿದ್ದರೆ ಆ ಸಂದರ್ಭದಲ್ಲಿ ಆಯ್ಕೆಯ ರೂಪದಲ್ಲಿ ಗೋಹತ್ಯೆ ನಡೆಸಬೇಕಾಗುತ್ತದೆ ಎಂದು ಸಾವರ್ಕರ್ ಹೇಳುತ್ತಾರೆ.

ಯುದ್ಧದ ಸಮಯದಲ್ಲಿ ಕೆಲವು ಗೋವುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಹಿಂದೂಗಳು ತಮ್ಮದೇ ಸೇನೆಗೆ ಬಹುದೊಡ್ಡ ಹಾನಿಯನ್ನುಂಟುಮಾಡಿದ್ದಾರೆ. ಪ್ರಾಣಿಗಳ ರಕ್ಷಣೆ ಹಿಂದೂ ಸೇನೆಗಳು ಅವಮಾನಕರ ರೀತಿಯಲ್ಲಿ ಹಿಮ್ಮೆಟ್ಟುವಂತೆ ಮಾಡಿವೆ ಮತ್ತು ಅಂತಿಮವಾಗಿ ಹೆಚ್ಚಿನ ಹಿಂದೂ ಪ್ರಾರ್ಥನಾ ಸ್ಥಳಗಳ ನಾಶ ಮತ್ತು ಭಾರತದಾದ್ಯಂತ ಹೆಚ್ಚು ಕಸಾಯಿಖಾನೆಗಳ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸುತ್ತಾರೆ.

ಹಿಂದೂಗಳನ್ನು ಕಟುವಾಗಿ ಟೀಕಿಸಿರುವುದು ಗೋಹತ್ಯೆ ತಮ್ಮ ಧಾರ್ಮಿಕ ಕರ್ತವ್ಯ ಎಂದು ಭಾವಿಸಿರುವ ಹಿಂದೂಯೇತರರಿಗೆ ನೀಡಿದ ಹಸಿರು ನಿಶಾನೆಯೇನಲ್ಲ. ಹಿಂದೂಗಳು ಮುಗ್ಧರಾಗಿರಬಹುದು, ಆದರೆ ಅವರು ಕ್ರೂರಿಗಳಲ್ಲ. ಇನ್ನೊಂದೆಡೆ, ಧರ್ಮದ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ವಧೆ ಮಾಡುವವರು ಕ್ರೂರಿಗಳಾಗಿದ್ದಾರೆ ಮತ್ತು ಗೋಪೂಜಕರ ನಂಬಿಕೆಗಳನ್ನು ಅಪಹಾಸ್ಯ ಮಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಸಾವರ್ಕರ್ ಎಚ್ಚರಿಸುತ್ತಾರೆ. ಎಲ್ಲ ಉದ್ದೇಶಪೂರ್ವಕ ವಧೆಗಳಲ್ಲಿ ಅತಿಯಾದ ಅನಾಗರಿಕತೆ, ಕೃತಘ್ನತೆ ಮತ್ತು ರಾಕ್ಷಸೀಯ ಪ್ರವೃತ್ತಿ ಕಂಡ ಸಾವರ್ಕರ್, ಅವುಗಳಲ್ಲಿ ತೊಡಗಿರುವವರು ಕೂಡಾ ಎಲ್ಲವನ್ನೂ ತ್ಯಜಿಸಿ ಗೋರಕ್ಷಣೆಯ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡುತ್ತಾರೆ.

ಕೃಪೆ: scroll.in

Writer - ವೈಭವ್ ಪುರಂದರೆ

contributor

Editor - ವೈಭವ್ ಪುರಂದರೆ

contributor

Similar News

ಜಗದಗಲ
ಜಗ ದಗಲ