ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯಲು ರಶ್ಯದ ರೊಬೊಟ್ ವಿಫಲ

Update: 2019-08-24 17:16 GMT

ಮಾಸ್ಕೊ,ಆ.24: ಮಾನವಾಕೃತಿಯ ರೊಬೊಟ್ ಅನ್ನು ಹೊತ್ತ ರಶ್ಯದ ಸೊಯುಝ್ ಬಾಹ್ಯಾಕಾಶ ನೌಕೆ ಶನಿವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ದಲ್ಲಿ ಇಳಿಯಲು ವಿಫಲವಾಗಿದೆಯೆಂದು ರಶ್ಯದ ಸುದ್ದಿ ಏಜೆನ್ಸಿಗಳು ಶನಿವಾರ ವರದಿ ಮಾಡಿವೆ.

    ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿರುವ ಗಗನಯಾತ್ರಿಗಳು ಹಾಗೂ ಅವರ ಕುಶಲತೆಯನ್ನು ಪರೀಕ್ಷಿಸುವುದಕ್ಕಾಗಿ ಅಲ್ಲಿಗೆ ಫೆಡೊರ್ ಎಂಬ ರೊಬೊಟ್ ಅನ್ನು ಎರಡು ವಾರಗಳ ಅವಧಿಗೆ ಕಳುಹಿಸಲಾಗಿತ್ತು.

   ರೊಬೊಟ್ ಇಳಿಯುವ ಪ್ರಕ್ರಿಯೆಯನ್ನು ಗ್ರೀನ್‌ವಿಚ್ ಕಾಲಮಾನ 5:30ರ ವೇಳೆಗೆ ನಡೆಸುವುದೆಂದು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ ಸ್ವಯಂಚಾಲಿತ ಇಳಿಯುವಿಕೆ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಅದು ವಿಫಲವಾಯಿತೆಂದು ನಾಸಾ ಟಿವಿ ವರದಿ ಮಾಡಿದೆ.

 ಪ್ರಸ್ತುತ ಫೆಡೊರ್ ರೊಬೊಟ್‌ನ್ನು ಹೊತ್ತ ಬಾಹ್ಯಾಕಾಶ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 96 ಮೀಟರ್ ದೂರದಲ್ಲಿದೆ. ಸೋಮವಾರ ಬೆಳಗ್ಗೆ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಯೋಜನೆಯನ್ನು ರಶ್ಯದ ಅಧಿಕಾರಿಗಳು ಹೊಂದಿದ್ದಾರೆಂದು ಆರ್‌ಐಎ ವರದಿ ಮಾಡಿದೆ.

    ಸ್ಕೈಬೊಟ್ ಎಫ್-850 ನೌಕೆಯ ಮೂಲಕ ಫೆಡೊರ್ ರೊಬೆಟ್ ಅನ್ನು ರಶ್ಯವು ಬಾಹ್ಯಾಕಾಕ್ಕೆ ಕಳುಹಿಸಿದೆ. ಬಾಹ್ಯಾಕಾದಲ್ಲಿ ಅಪಾಯಕಾರಿ ಪರಿಸ್ಥಿತಿಗಳಲ್ಲಿ ರೊಬೊಟ್ ಕಾರ್ಯನಿರ್ವಹಿಸುವಂತೆ ಮಾಡಲು ನಾಸಾವು ಪ್ರಪ್ರಥಮ ಬಾರಿಗೆ 2011ರಲ್ಲಿ ರೊಬೊನಾಟ್ ಎಂಬ ಮಾನವಕೃತಿಯ ರೊಬೊಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News