ಯುಎಇ: ರುಪೇ ಕಾರ್ಡ್‌ಗೆ ಚಾಲನೆ

Update: 2019-08-24 17:30 GMT

   ಅಬುದಾಭಿ,ಆ.24: ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಬುದಾಭಿಯಲ್ಲಿ ರುಪೇ ಕಾರ್ಡ್‌ಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ಭಾರತದ ಇಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಆರಂಭಿಸಿರುವ ಯುಎಇನ ಪ್ರಪ್ರಥಮ ರಾಷ್ಟ್ರವೆಂಬ ಹೆಗ್ಗಳಿಕೆಗೆ ಅಬುದಾಭಿ ಪಾತ್ರವಾಗಿದೆ.

ಯುಎಇನ ಹಲವಾರು ಉದ್ಯಮ ಸಮೂಹಗಳು ರುಪೇ ಮೂಲಕ ಹಣ ಪಾವತಿಯನ್ನು ಸ್ವೀಕರಿಸಲು ಒಪ್ಪಿಕೊಂಡಿವೆ’’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ರುಪೇ ಕಾರ್ಡ್ ಪರಿಚಯಿಸುವ ಮೂಲಕ ಯುಎಇಯ ಪ್ರವಾಸೋದ್ಯಮ ವಾಣಿಜ್ಯಕ್ಕೆ ಉತ್ತೇಜನ ದೊರೆಯಲಿದ್ದು, ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಪ್ರಯೋಜನವಾಗಲಿದೆಯೆಂದು ಯುಎಇಯಲ್ಲಿನ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News