ಕಾಶ್ಮೀರ ವಿವಾದ: ಮೆರ್ಕೆಲ್ ಜೊತೆ ಇಮ್ರಾನ್ ದೂರವಾಣಿ ಮಾತುಕತೆ

Update: 2019-08-24 17:41 GMT

ಇಸ್ಲಾಮಾಬಾದ್, ಆ.24: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮೆರ್ಕೆಲ್ ಜೊತೆ ಶುಕ್ರವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ.

 ಜಮ್ಮುಕಾಶ್ಮೀರದ ವಿಶೇಷ ಸ್ತಾನಮಾನವನ್ನು ಭಾರತವು ರದ್ದುಪಡಿಸಿರುವುದು ಆ ಪ್ರದೇಶದ ಶಾಂತಿ ಹಾಗೂ ಭದ್ರತೆಗೆ ಗಂಭೀರವಾದ ಪರಿಣಾಮಗಳನ್ನುಂಟು ಮಾಡಿದೆ ಹಾಗೂ ಈ ವಿಷಯವಾಗಿ ಅಂತಾರಾಷ್ಟ್ರೀಯ ಸಮುದಾಯವು ತುರ್ತಾಗಿ ಕಾರ್ಯಾ ಚರಿಸಬೇಕಾದ ಹೊಣೆಗಾರಿಕೆಯನ್ನು ಹೊಂದಿದೆ ಎಂದರು.

     ಇದಕ್ಕುತ್ತರಿಸಿದ ಮೆರ್ಕೆಲ್ ಅವರು ಜರ್ಮನಿಯು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ ಎಂದರು. ಉಭಯದೇಶಗಳ ನಡುವೆ ತಲೆದೋರಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಹಾಗೂ ಕಾಶ್ಮೀರ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News