ಪ್ರೀತಿಸಿ ಮದುವೆಯಾದ ಕೆಲ ನಿಮಿಷಗಳಲ್ಲೇ ಅಪಘಾತದಲ್ಲಿ ಕೊನೆಯುಸಿರೆಳೆದ ಜೋಡಿ

Update: 2019-08-25 10:32 GMT

ಟೆಕ್ಸಾಸ್, ಆ.25: ಪ್ರೀತಿಸಿ ಮದುವೆಯಾದ ಜೋಡಿಯೊಂದು ವಿವಾಹದ ನಂತರ ಕೆಲ ನಿಮಿಷಗಳಲ್ಲೇ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ.

ಬಾಲ್ಯದ ಗೆಳೆಯರಾಗಿದ್ದ ಹಾರ್ಲೆ ಮೋರ್ಗನ್ ಮತ್ತು ರಿಯಾನನ್ ಬೋಡ್ರೂಕ್ಸ್ ವಿವಾಹವಾದ ಕೆಲ ನಿಮಿಷಗಳಲ್ಲೇ ಮೃತಪಟ್ಟವರು. ವಿವಾಹದ ನಂತರ ಔತಣಕೂಟದತ್ತ ಈ ಜೋಡಿ ತೆರಳಿತ್ತು. ಅವರ ಕುಟುಂಬಸ್ಥರು ಕೂಡ ಹಿಂದೆ ಇದ್ದರು.

ವರ ಹಾರ್ಲೆ ಮೋರ್ಗನ್ ಕಾರು ಚಲಾಯಿಸುತ್ತಿದ್ದು, ಜಸ್ಟಿಸ್ ಆಫ್ ದ ಪೀಸ್ ಕಟ್ಟಡದ ಮುಂದಿನ ಹೆದ್ದಾರಿಯತ್ತ ತೆರಳುತ್ತಿದ್ದರು. ಈ ಸಂದರ್ಭ ಭಾರೀ ಟ್ರಕ್ ಒಂದು ಇವರ ಕಾರಿಗೆ ಢಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಕಾರು ಹಲವು ಬಾರಿ ಪಲ್ಟಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಅಪಘಾತದಿಂದ ಹಾರ್ಲೆ ಮೋರ್ಗನ್ ಮತ್ತು ರಿಯಾನನ್ ಜೋಡಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News