ಸಾಮಾಜಿಕ ಮಾಧ್ಯಮದ ಪೋಸ್ಟ್ ಹಂಚುವಾಗ ಎಚ್ಚರ ವಹಿಸಿ: ಪ್ರಣವ್ ಮುಖರ್ಜಿ

Update: 2019-08-25 18:10 GMT

ಕೋಲ್ಕತಾ, ಆ. 25: ಮುದ್ರಣ ಪತ್ರಿಕೋದ್ಯಮ ಓದುಗರ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ ಎಂಬುದನ್ನು ದೃಢಪಡಿಸಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸತ್ಯಾಸತ್ಯತೆ ಅರಿಯದೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚುವ ಬಗ್ಗೆ ಜನರಿಗೆ ರವಿವಾರ ಎಚ್ಚರಿಕೆ ನೀಡಿದರು.

 ಇಲ್ಲಿ ಮಾಧ್ಯಮ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖರ್ಜಿ, ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚುವ ಸಂದರ್ಭ ಜನರು ಎಚ್ಚರಿಕೆಯಿಂದ ಇರಬೇಕು ಎಂದರು. ಹಲವು ಸಾಮಾಜಿಕ ಹಾಗೂ ಕೋಮು ಹಿಂಸಾಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಕಿಡಿಗೇಡಿ ಜನರು ಹಂಚುವ ವದಂತಿಗಳೇ ಕಾರಣ. ಇಂತಹ ಪೋಸ್ಟ್‌ಗಳನ್ನು ಮತ್ತೆ ಹಂಚುವ ಜನರು ಕೂಡ ಕಿಡಿಗೇಡಿಗಳಾಗುತ್ತಾರೆ ಎಂದು ಮುಖರ್ಜಿ ಹೇಳಿದರು.

ದಿನಪತ್ರಿಕೆಗಳನ್ನು ಓದುವಾಗ ವರದಿ ಪರಿಷ್ಕರಿಸಲಾಗಿದೆ ಹಾಗೂ ಪರಿಶೀಲಿಸಲಾಗಿದೆ ಎಂಬ ಭರವಸೆ ಇರುತ್ತದೆ. ಆದರೆ, ಸಾಮಾಜಿಕ ಜಾಲ ತಾಣದ ಪೋಸ್ಟ್‌ಗಳಲ್ಲಿ ಈ ಭರವಸೆ ಇರುವುದಿಲ್ಲ ಎಂದು ಅವರು ತಿಳಿಸಿದರು. ಆದುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚುವಾಗ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು. ‘‘ಸಂಪಾದಕೀಯದಲ್ಲಿ ನಿಮಗೆ (ಪತ್ರಕರ್ತರಿಗೆ) ನಿಮ್ಮ ವೈಯುಕ್ತಿಕ ನಿಲುವುಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಆದರೆ, ಸುದ್ದಿಯಲ್ಲಿ ವಸ್ತುನಿಷ್ಠತೆಯನ್ನು ಕಾಯ್ದುಕೊಳ್ಳಿ ಎಂದು ಪ್ರಣವ್ ಮುಖರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News