ಉಗ್ರರು ನಮಗಿಂತ ಹೆಚ್ಚು ಫೋನ್ ಬಳಸುತ್ತಾರೆ: ಜಮ್ಮು ಕಾಶ್ಮೀರ ರಾಜ್ಯಪಾಲ

Update: 2019-08-28 18:45 GMT

ಜಮ್ಮುಕಾಶ್ಮೀರ, ಆ. 28: ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ ಆಗಸ್ಟ್ 5ರಂದು ಹೇರಲಾದ ಸಂವಹನ ನಿರ್ಬಂಧವನ್ನು ಬುಧವಾರ ಸಮರ್ಥಿಸಿಕೊಂಡಿರುವ ರಾಜ್ಯಪಾಲ ಸತ್ಯಪಾಲ ಮಲಿಕ್, ‘ಬೋಧನೆ ಹಾಗೂ ಉತ್ತೇಜನ’ಕ್ಕೆ ಭಯೋತ್ಪಾದಕರು ಹಾಗೂ ಪಾಕಿಸ್ತಾನ ಹೆಚ್ಚಾಗಿ ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಗಳನ್ನು ಬಳಸುತ್ತಾರೆ. ಆದುದರಿಂದ ಇಂಟರ್‌ನೆಟ್ ಸೇವೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದಿದ್ದಾರೆ.

 ಕುಪ್ವಾರ ಹಾಗೂ ಹಂದ್ವಾರಾ ಜಿಲ್ಲೆಗಳಲ್ಲಿ ಮೊಬೈಲ್ ಫೋನ್ ಸಂಪರ್ಕವನ್ನು ಮರು ಆರಂಭಿಸಲಾಗಿದೆ. ಇತರ ಜಿಲ್ಲೆಗಳಲ್ಲಿ ಈ ಸೇವೆಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಫೋನ್ ಹಾಗೂ ಇಂಟರ್‌ನೆಟ್ ಮಾದ್ಯಮವನ್ನು ನಾವು ಕಡಿಮೆ ಬಳಸುತ್ತೇವೆ. ಆದರೆ, ಭಯೋತ್ಪಾದಕರು ಹಾಗೂ ಪಾಕಿಸ್ತಾನ ತಮ್ಮ ಬೋಧನೆ ಹಾಗೂ ಉತ್ತೇಜನಕ್ಕೆ ಹೆಚ್ಚು ಬಳಸುತ್ತಿದ್ದಾರೆ. ಇದು ನಮ್ಮ ವಿರುದ್ಧ ಬಳಸುವ ಒಂದು ರೀತಿಯ ಮಾದ್ಯಮ. ಆದುದರಿಂದ ನಾವು ರದ್ದುಗೊಳಿಸಿದೆವು.

 ಈ ಸೇವೆಯನ್ನು ಕ್ರಮೇಣವಾಗಿ ಆರಂಭಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರತಿಯೋರ್ವ ಕಾಶ್ಮೀರಿಯ ಬದುಕು ಕೂಡಾ ಮೌಲ್ಯಯುತ. ಒಂದೇ ಒಂದು ಜೀವವನ್ನು ಕೂಡ ಕಳೆದುಕೊಳ್ಳಲು ಆಡಳಿತ ಬಯಸುವುದಿಲ್ಲ. ಯಾವುದೇ ನಾಗರಿಕರಿಗೆ ಗಾಯಗಳಾಗಿಲ್ಲ. ಹಿಂಸಾಚಾರದ ಸಂದರ್ಭ ಕೆಲವರಿಗೆ ಮಾತ್ರ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News