×
Ad

ಪಾಕ್: ಸಿಖ್ ಬಾಲಕಿಯನ್ನು ಅಪಹರಿಸಿ ಬಲವಂತದ ಮದುವೆ: ಹೆತ್ತವರ ಆರೋಪ

Update: 2019-08-31 23:22 IST

ನನ್‌ಕಾನ ಸಾಹಿಬ್ (ಪಾಕಿಸ್ತಾನ), ಆ. 31: ಪಾಕಿಸ್ತಾನದಲ್ಲಿ ಅಪಹರಣಕ್ಕೊಳಗಾಗಿ ಬಲವಂತದ ಮತಾಂತರಕ್ಕೆ ಒಳಗಾದರೆನ್ನಲಾದ ಸಿಖ್ ಬಾಲಕಿ ಮನೆಗೆ ವಾಪಸಾಗಿದ್ದಾರೆ ಎಂದು ನನ್‌ಖಾನ ಸಾಹಿಬ್ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಾಲಕಿಯನ್ನು ಅಪಹರಿಸಿ ಮುಸ್ಲಿಮ್ ವ್ಯಕ್ತಿಯೊಬ್ಬನೊಂದಿಗೆ ಬಲವಂತದಿಂದ ಮದುವೆ ಮಾಡಲಾಗಿದೆ ಎನ್ನಲಾಗಿದೆ. ಈ ವಿಷಯ ಗುರುವಾರವಷ್ಟೇ ಬೆಳಕಿಗೆ ಬಂದಿದೆ. ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂಬುದಾಗಿ ಬಾಲಕಿಯ ಹೆತ್ತವರು ಆರೋಪಿಸುವ ವೀಡಿಯೊವೊಂದನ್ನು ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಶಾಸಕ ಮನ್‌ಜಿಂದರ್ ಸಿಂಗ್ ಸೀರ್ಸಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ಘಟನೆಯು ವಿಶ್ವದಾದ್ಯಂತವಿರುವ ಸಿಖ್ಖರ ಗಮನ ಸೆಳೆದಿದ್ದು, ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಅಪಹರಣಕ್ಕೊಳಗಾಗಿರುವ ಬಾಲಕಿಯ ತಂದೆ ಭಗವಾನ್ ಸಿಂಗ್ ಗುರುದ್ವಾರ ತಂಬು ಸಾಹಿಬ್‌ನಲ್ಲಿ ಪುರೋಹಿತ (ಗ್ರಂಥಿ)ರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News