×
Ad

ವಿಶ್ವ ಚಾಂಪಿಯನ್‌ಶಿಪ್‌ಗೆ ಜಾನ್ಸನ್ ಅರ್ಹತೆ

Update: 2019-09-01 23:58 IST

ಬರ್ಲಿನ್, ಸೆ.1: ಏಶ್ಯನ್ ಗೇಮ್ಸ್ ಚಾಂಪಿಯನ್ ಜಿನ್ಸನ್ ಜಾನ್ಸನ್ ರವಿವಾರ ನಡೆದ ಬರ್ಲಿನ್ ಅಥ್ಲೆಟಿಕ್ ಕೂಟದಲ್ಲಿ 1,500 ಮೀ. ಓಟದ ಸ್ಪರ್ಧೆಯಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡು ಬೆಳ್ಳಿ ಪದಕ ಜಯಿಸಿದರು.

ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಜಾನ್ಸನ್ 3 ನಿಮಿಷ, 35.24 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಮಾತ್ರವಲ್ಲ ಈ ವರ್ಷ ದೋಹಾದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆದಿದ್ದಾರೆ. ಅಮೆರಿಕದ ಜೋಶುವಾ ಥಾಮ್ಸನ್ ಚಿನ್ನ ಜಯಿಸಿದರು. 28ರ ಹರೆಯದ ಕೇರಳದ ಅಥ್ಲೀಟ್ ಜಾನ್ಸನ್ ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು (3:37.86 ಸೆ.)ಉತ್ತಮಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News