ಮಕ್ಕಳ ಅಪಹರಣಕಾರನೆಂದು ತಿಳಿದು ಕಾರ್ಮಿಕನನ್ನು ಹೊಡೆದು ಕೊಂದ ಗುಂಪು

Update: 2019-09-02 12:54 GMT

ಲಕ್ನೋ, ಸೆ.2: ಮಕ್ಕಳ ಅಪಹರಣಕಾರರೆಂದು ಗುಂಪೊಂದು ಒಂಬತ್ತು ಮಂದಿಯ ಮೇಲೆ ದಾಳಿ ನಡೆಸಿದ ಪರಿಣಾಮ ಒಬ್ಬ ಕಾರ್ಮಿಕ ಮೃತಪಟ್ಟು, ಇತರ ಎಂಟು ಮಂದಿ ಗಾಯಗೊಂಡ ಘಟನೆ ಅಮೇಠಿಯಿಂದ ವರದಿಯಾಗಿದೆ.

ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬ ಮಣ್ಣಿನಲ್ಲಿ ನೋವಿನಿಂದ ಹೊರಳಾಡುತ್ತಿರುವುದು ಪ್ರತ್ಯಕ್ಷದರ್ಶಿಯೊಬ್ಬರು ತೆಗೆದ ವೀಡಿಯೋದಲ್ಲಿ ಕಾಣಿಸುತ್ತದೆ. ಗುಂಪೊಂದು ಈ ವ್ಯಕ್ತಿಯ ಸುತ್ತ ನಿಂತುಕೊಂಡು ಬೊಬ್ಬಿಡುತ್ತಿರುವುದೂ ಕೇಳಿಸುತ್ತದೆ. ಇನ್ನೊಂದು ವೀಡಿಯೋದಲ್ಲಿ ನಾಲ್ಕು ಮಂದಿ ಪೊಲೀಸರು ವ್ಯಕ್ತಿಯೊಬ್ಬನನ್ನು  ಆತನ ಕೈ ಮತ್ತು ಕಾಲುಗಳನ್ನು ಹಿಡಿದು ಭತ್ತದ ಗದ್ದೆಯೊಂದರಿಂದ ಸಾಗಿಸುತ್ತಿರುವುದು ಕಾಣಿಸುತ್ತದೆ.

ಪ್ರತಾಪಘಡದ ಕೆಲ ಕಾರ್ಮಿಕರು ದಿನದ ಕೆಲಸ ಮುಗಿಸಿ ಮದ್ಯ ಸೇವಿಸಲು ಮದ್ಯದಂಗಡಿ ಸಮೀಪ ನಿಂತಿದ್ದ ಸಮಯ ಅವರು ಇನ್ನೊಬ್ಬ ಮದ್ಯದ ನಶೆಯಲ್ಲಿದ್ದ ವ್ಯಕ್ತಿಯ ಜತೆ ವಾಗ್ವಾದಕ್ಕಿಳಿದು ಆತನಿಗೆ ಹೊಡೆದು ಆತನನ್ನು ವಾಹನವೊಂದರೊಳಗೆ ಸಾಗಿಸಲು ಯತ್ನಿಸುತ್ತಿತ್ತು. ಗ್ರಾಮಸ್ಥರೊಬ್ಬರು ಅವರು ಮಗುವನ್ನು ಅಪಹರಿಸುತ್ತಿದ್ದಾರೆಂದು ತಿಳಿದಿದ್ದೇ ಈ ಗುಂಪು ಥಳಿತ ಘಟನೆಗೆ ಕಾರಣವೆಂದು ಹೇಳಲಾಗಿದೆ.

ಸಂಭಲ್ ಎಂಬಲ್ಲಿ  ತನ್ನ ಸೋದರಳಿಯನನ್ನು ವೈದ್ಯರ ಬಳಿ ಕೊಂಡೊಯ್ಯುತ್ತಿದ್ದ  ವ್ಯಕ್ತಿಯನ್ನು ಗುಂಪೊಂದು ಹೊಡೆದು ಸಾಯಿಸಿದ ಘಟನೆ ನಡೆದ ಕೆಲವೇ ದಿನಗಳಲ್ಲಿ ಅಮೇಠಿಯಲ್ಲಿ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News