ಪ್ರಧಾನಿ ಮೋದಿಗೆ ಪ್ರತಿಷ್ಠಿತ ‘ಬಿಲ್ ಆ್ಯಂಡ್ ಮೆಲಿಂಡಾಗೇಟ್ಸ್’ ಪ್ರಶಸ್ತಿ

Update: 2019-09-02 12:56 GMT

ಹೊಸದಿಲ್ಲಿ, ಸೆ.2: ತಮ್ಮ ಮಹತ್ವಾಕಾಂಕ್ಷೆಯ `ಸ್ವಚ್ಛ ಭಾರತ್ ಅಭಿಯಾನ್' ಕಾರ್ಯಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ‘ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್’ನ ಪ್ರತಿಷ್ಠಿತ ಪ್ರಶಸ್ತಿ ಪಡೆಯಲಿದ್ದಾರೆ.

ಪ್ರಧಾನಿಯ ಅಮೆರಿಕಾ ಭೇಟಿ ವೇಳೆ ಆವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲು ಫೌಂಡೇಶನ್ ನಿರ್ಧರಿಸಿದೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯಾಗಿ ನರೇಂದ್ರ ಮೋದಿ ಮೊದಲ ಬಾರಿಗೆ 2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸ್ವಚ್ಛ ಭಾರತ್ ಅಭಿಯಾನ್ ಆರಂಭಿಸಲಾಗಿತ್ತು ಹಾಗೂ ಐದು ವರ್ಷದೊಳಗೆ ದೇಶವನ್ನು ಬಯಲು ಶೌಚ ಮುಕ್ತಗೊಳಿಸುವ ಉದ್ದೇಶ ಹೊಂದಿತ್ತು.

ಕಳೆದ ವರ್ಷ ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ `ಚಾಂಪಿಯನ್ಸ್ ಆಫ್ ದಿ ಅರ್ತ್' ಪ್ರಶಸ್ತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News