ಟ್ರಾಫಿಕ್ ನಿಯಮ ಉಲ್ಲಂಘಿಸಿ ದುಬಾರಿ ಬೆಲೆ ತೆತ್ತ ರಿಕ್ಷಾ ಚಾಲಕ

Update: 2019-09-04 09:28 GMT

ಗುರುಗ್ರಾಮ, ಸೆ.4: ಸಿಕಂದರಾಪುರ ಪ್ರದೇಶದಲ್ಲಿ ಟ್ರಾಫಿಕ್ ರೆಡ್ ಲೈಟ್ ನ್ನು ಜಂಪ್ ಮಾಡಿದ ಆಟೋ ರಿಕ್ಷಾ ಚಾಲಕನಿಗೆ ಟ್ರಾಫಿಕ್ ಪೊಲೀಸರು 32,500 ರೂ. ದಂಡ ವಿಧಿಸಿರುವ ಘಟನೆ ವರದಿಯಾಗಿದೆ.

ಟ್ರಾಫಿಕ್ ಸಿಗ್ನಲ್ನ್ನು ಉಲ್ಲಂಘಿಸಿದ ಪಶ್ಚಿಮಬಂಗಾಳದ ನಿವಾಸಿ ಮುಹಮ್ಮದ್ ಮುಸ್ತಕಿನ್ ರನ್ನು ತಡೆದ ಟ್ರಾಫಿಕ್ ಪೊಲೀಸರು ದಾಖಲೆಯನ್ನು ನೀಡುವಂತೆ ಸೂಚಿಸಿದರು. ದಾಖಲೆಗಳನ್ನು ನೀಡದ ಮುಸ್ತಕಿನ್ ವಿರುದ್ಧ ಹಲವು ಸಂಚಾರಿ ನಿಯಮ ಉಲಂಘನೆಯ ಆರೋಪ ಹೊರಿಸಿ ಭಾರೀ ದಂಡ ವಿಧಿಸಿದ್ದಾರೆ.

ಈ ಹಿಂದೆ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಮುಸ್ತಕಿನ್, ‘’ನಾನು ಎರಡು ತಿಂಗಳ ಹಿಂದೆಯಷ್ಟೇ ರಿಕ್ಷಾ ಚಲಾಯಿಸಲು ಕಲಿತ್ತಿದ್ದೇನೆ. ಈಗ ನನ್ನ ಬಳಿ ಇಷ್ಟೊಂದು ದಂಡ ಭರಿಸಲು ಹಣವಿಲ್ಲ’’ ಎಂದರು.

ಗುರುಗ್ರಾಮದ ಟ್ರಾಫಿಕ್ ಪೊಲೀಸರು ಮಂಗಳವಾರ ಮತ್ತೊಂದು ಟ್ರಾಫಿಕ್ ಉಲ್ಲಂಘನೆಯ ಕೇಸ್ ನಲ್ಲಿ ದ್ವಿಚಕ್ರ ವಾಹನ ಚಾಲಕನಿಗೆ 23,000 ರೂ. ದಂಡ ವಿಧಿಸಿ ಶಾಕ್ ನೀಡಿದ್ದರು. ಸೆ.1 ರಿಂದ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆ(ತಿದ್ದುಪಡಿ)ಅಡಿ ಹೊಸ ಸಂಚಾರಿ ನಿಯಮಗಳ ಅಡಿ ಈ ದಂಡವನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News