ಅರ್ಥಿಕ ಹಿಂಜರಿತದ ಎಫೆಕ್ಟ್: ಭಾರೀ ಗಾತ್ರದ ವಾಹನಗಳ ಮಾರಾಟದಲ್ಲಿ ತೀವ್ರ ಕುಸಿತ

Update: 2019-09-04 17:58 GMT

ಮುಂಬೈ,ಸೆ.14: ದೇಶದ ಆರ್ಥಿಕ ಚಟುವಟಿಕೆಯ ಮಾನದಂಡವೆಂದೇ ಪರಿಗಣಿಸಲ್ಪಡುವ ಬಸ್ಸುಗಳನ್ನು ಹೊರತುಪಡಿಸಿ,ದೇಶದ ಆರ್ಥಿಕತೆಯ ಮಧ್ಯಮದರ್ಜೆಯ ಹಾಗೂ ಭಾರೀ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತವುಂಟಾಗಿದೆಯೆಂದು ದತ್ತಾಂಶ ವರದಿ ತಿಳಿಸಿದೆ.

ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ.5ರಷ್ಟು ಬೆಳೆದಿದ್ದು, ಇದು ಸುಮಾರು ಆರು ವರ್ಷಗಳಲ್ಲೇ ಅತ್ಯಂತ ನಿಧಾನವಾದುದಾಗಿದೆ. ಉತ್ಪಾದನಾವಲಯದಲ್ಲಂತೂ ತೀರಾ ಕನಿಷ್ಠ ಅಂದರೆ 0.6 ಶೇಕಡ ಬೆಳವಣಿಗೆಯಷ್ಟೇ ಆಗಿದೆ.

ಭಾರತದ ಪ್ರಮುಖ ನಾಲ್ಕು ಮಧ್ಯಮ ಹಾಗೂ ಭಾರೀ ಗಾತ್ರ ವಾಹನಗಳ ತಯಾರಕ ಕಂಪೆನಿಗಳಾದ ಟಾಟಾ ಮೋಟಾರ್ಸ್‌, ಅಶೋಕ್ ಲೇಲ್ಯಾಂಡ್, ವೊಲ್ವೊ ಈಶರ್ ಹಾಗೂ ಮಹೀಂದ್ರ ಆ್ಯಂಡ್ ಮಹೀಂದ್ರ ಅವರ ವಾಹನ ಉತ್ಪನ್ನಗಳ ಪ್ರಮಾಣವು 31,067 ಯೂನಿಟ್‌ಗಳಿಗೆ ಇಳಿದಿದೆ. ಕಳೆದ ಶೇ.59ರಷ್ಟು ಕುಸಿತವನ್ನು ಕಂಡಿತ್ತು. ಮಾರಾಟದಲ್ಲಿ ತೀವ್ರ ಇಳಿಕೆಯಿಂದ ಹತಾಶರಾಗಿರುವ ವಾಹನ ತಯಾರಕ ಕಂಪೆನಿಗಳು ಅಧಿಕ ಟನ್ (ಸುಮಾರು 49 ಟನ್ ಸಾಮರ್ಥ್ಯ) ಹೊರಬಲ್ಲ ಟ್ರಕ್‌ಗಳಿಗೆ 9 ಲಕ್ಷ ರೂ.ವರೆಗೂ ಡಿಸ್ಕೌಂಟ್ ಘೋಷಿಸಿದ್ದಾರೆ. ಟಾಟಾ ಮೋಟಾರ್ಸ್‌ ಸಂಸ್ಥೆಯ ಅಧಿಕ ಭಾರ ಸಾಮರ್ಥ್ಯ (ಹೆವಿ ಡ್ಯೂಟಿ)ದ ಟ್ರಕ್‌ಗಳ ಮಾರಾಟದಲ್ಲಿ 5340ರಷ್ಚು ಕುಸಿತವಾಗಿದ್ದು, ಶೇ.59ರಷ್ಟು ಇಳಿಕೆಯಾಗಿದೆ.

ವೊಲ್ವೊ ಈಶರ್ ವಾಣಿಜ್ಯ ವಾಹನಗಳು ಹಾಗೂ ಮಹೀಂದ್ರ ಆ್ಯಂಡ್ ಮಹೀಂದ್ರ ವಾಹನಗಳ ಮಾರಾಟ ಪ್ರಮಾಣದಲ್ಲೂ ಕ್ರಮವಾಗಿ 41.7 ಶೇಕಡ ಹಾಗೂ 69 ಶೇಕಡ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News