ಮದ್ರಾಸ್ ಐಐಟಿ, ಬಿಎಚ್‌ಯು ಸಹಿತ 5 ಸರಕಾರಿ ವಿದ್ಯಾಸಂಸ್ಥೆಗಳಿಗೆ ಐಒಇ ಪ್ರಶಸ್ತಿ

Update: 2019-09-05 17:41 GMT

ಹೊಸದಿಲ್ಲಿ, ಸೆ. 5: ದಿಲ್ಲಿ ವಿಶ್ವವಿದ್ಯಾನಿಲಯ, ಬನಾರಾಸ್ ಹಿಂದೂ ವಿಶ್ವವಿದ್ಯಾನಿಲಯ, ಹೈದರಾಬಾದ್ ವಿಶ್ವವಿದ್ಯಾನಿಲಯ, ಮದ್ರಾಸ್ ಐಐಟಿ ಹಾಗೂ ಖರಗ್‌ಪುರ ಐಐಟಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಗುರುವಾರ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಸ್ಥಾನಮಾನ ನೀಡಿ ಗೌರವಿಸಿದೆ. ಸಬಲೀಕೃತ ತಜ್ಞರ ಸಮಿತಿ ಸಲಹೆ ಆಧಾರದಲ್ಲಿ ಕಳೆದ ತಿಂಗಳು ವಿಶ್ವವಿದ್ಯಾನಿಲಯ ಅನುದಾನ ಆಯೋಗ ನೀಡಿ ಶಿಫಾರಸಿನ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಐದು ಸರಕಾರಿ ಸಂಸ್ಥೆಗಳಿಗೆ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಸ್ಥಾನಮಾನ ನೀಡಿ ಆದೇಶ ನೀಡಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ. ಇದಲ್ಲದೆ ಖಾಸಗಿ ವಿಶ್ವವಿದ್ಯಾನಿಲಯಗಳಾದ ತಮಿಳುನಾಡಿನ ಅಮೃತಾ ವಿದ್ಯಾಪೀಠಂ, ಜಾಮಿಯಾ ಹಮ್‌ದರ್ದ್ ವಿಶ್ವವಿದ್ಯಾನಿಲಯ, ಒಡಿಶಾದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಹಾಗೂ ಮೊಹಾಲಿಯ ಭಾರತಿ ಇನ್‌ಸ್ಟಿಟ್ಯೂಟ್‌ಗೆ ಕೂಡ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಸ್ಥಾನಮಾನ ನೀಡಿ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News