ದುರ್ಬಲಗೊಂಡು ಅಮೆರಿಕದತ್ತ ಸಾಗುತ್ತಿರುವ ಚಂಡಮಾರುತ

Update: 2019-09-06 16:46 GMT

ಮಯಾಮಿ (ಅಮೆರಿಕ), ಸೆ. 6: ಚಂಡಮಾರುತ ‘ಡೊರಿಯಾನ್’ ಗುರುವಾರ 2ನೇ ದರ್ಜೆಯ ಬಿರುಗಾಳಿಯಾಗಿ ದುರ್ಬಲಗೊಂಡಿದ್ದು, ಅಮೆರಿಕದ ದಕ್ಷಿಣ ಮತ್ತು ಉತ್ತರ ಕರೋಲಿನ ರಾಜ್ಯಗಳತ್ತ ಧಾವಿಸುತ್ತಿದೆ ಎಂದು ಅಮೆರಿಕದ ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಡೊರಿಯಾನ್ ಚಂಡಮಾರುತವು ಗಂಟೆಗೆ 175 ಕಿಲೋಮೀಟರ್ ವೇಗವನ್ನು ಹೊಂದಿತ್ತು ಎಂದು ಮಯಾಮಿಯ ನ್ಯಾಶನಲ್ ಹರಿಕೇನ್ ಸೆಂಟರ್ ಹೇಳಿದೆ.

ಕರೋಲಿನ ಕರಾವಳಿಗೆ ಅದು ಈಗಲೂ ಬೆದರಿಕೆಯಾಗಿದೆ ಎಂದು ಅದು ತಿಳಿಸಿದೆ.

‘‘ಚಂಡಮಾರುತದ ಕೇಂದ್ರವು ದಕ್ಷಿಣ ಮತ್ತು ಉತ್ತರ ಕರೋಲಿನ ಕರಾವಳಿಗಳ ಸಮೀಪ ಚಲಿಸುತ್ತಿದ್ದು, ಅದು ಈಗಲೂ ಪ್ರಬಲ ಚಂಡಮಾರುತವಾಗಿಯೇ ಉಳಿದಿದೆ ಎಂದು ನಿರೀಕ್ಷಿಸಲಾಗಿದೆ’’ ಎಂದು ನ್ಯಾಶನಲ್ ಹರಿಕೇನ್ ಸೆಂಟರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News