ಆ್ಯಶಸ್ ಟೆಸ್ಟ್: ಇಂಗ್ಲೆಂಡ್ 117/2

Update: 2019-09-06 18:17 GMT

ಮ್ಯಾಂಚೆಸ್ಟರ್, ಸೆ.6: ಮಳೆಬಾಧಿತ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 42 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 117 ರನ್ ಗಳಿಸಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯ ಸ್ಟೀವ್ ಸ್ಮಿತ್ ದ್ವಿಶತಕದ ಬಲದಿಂದ 8 ವಿಕೆಟ್ ನಷ್ಟಕ್ಕೆ 497 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಆಸೀಸ್‌ನ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್ ಗುರುವಾರ ಎರಡನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿತ್ತು.

ಮೂರನೇ ದಿನವಾದ ಶುಕ್ರವಾರ ಭೋಜನ ವಿರಾಮದ ತನಕ ಮಳೆಯು ಪಂದ್ಯ ಆರಂಭಿಸಲು ಅಡ್ಡಿಯಾಯಿತು. ಪಂದ್ಯ ಪುನರಾರಂಭವಾದಾಗ ಓವರ್ಟನ್(5) ನಿನ್ನೆಯ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ಆರಂಭಿಕ ಆಟಗಾರ ಬರ್ನ್ಸ್(59, 121 ಎಸೆತ) ಹಾಗೂ ಜೋ ರೂಟ್(ಔಟಾಗದೆ 42, 94 ಎಸೆತ)3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 93 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಹೇಝಲ್‌ವುಡ್(1-27)ಹಾಗೂ ಕಮಿನ್ಸ್(1-16) ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News