ದಲಿತರು ಎಂದರೆ ಯಾರು?: ವಿವಾದ ಸೃಷ್ಟಿಸಿದ ಪ್ರಶ್ನೆ ಪತ್ರಿಕೆ

Update: 2019-09-07 16:39 GMT

ಹೊಸದಿಲ್ಲಿ, ಸೆ.7: ಧಾರ್ಮಿಕ ಮತ್ತು ಜಾತಿ ತಾರತಮ್ಯದ ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಯೊಂದರ ಫೋಟೊವನ್ನು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಟ್ವೀಟ್ ಮಾಡಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.;

ಈ ರೀತಿಯ ಪ್ರಶ್ನೆಗಳಿರುವ ಪ್ರಶ್ನೆಪತ್ರಿಕೆಯ ಫೋಟೊವನ್ನು ಸ್ಟಾಲಿನ್ ಟ್ವೀಟ್ ಮಾಡಿದ್ದು, ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

6ನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಕೇಂದ್ರೀಯ ವಿದ್ಯಾಲಯ ಈ ಪ್ರಶ್ನೆ ಪತ್ರಿಕೆ ಸಿದ್ಧ ಮಾಡಿದೆ ಎಂದವರು ಆರೋಪಿಸಿದ್ದಾರೆ. “ಜಾತಿ ತಾರತಮ್ಯ ಮತ್ತು ಕೋಮು ವಿಭಜನೆಯ ಪ್ರಶ್ನೆಗಳಿರುವ ಕೇಂದ್ರೀಯ ವಿದ್ಯಾಲಯದ 6ನೆ ತರಗತಿಯ ಪ್ರಶ್ನೆಪತ್ರಿಕೆ ನೋಡಿ ಆಘಾತಗೊಂಡಿದ್ದೇನೆ” ಎಂದವರು ಹೇಳಿದ್ದಾರೆ.

“ದಲಿತರು ಎಂದರೆ ಯಾರು?” ಎನ್ನುವ ಪ್ರಶ್ನೆಗೆ ‘ವಿದೇಶಿಯರು, ಅಸ್ಪ್ರಶ್ಯರು, ಮಧ್ಯಮ ವರ್ಗದವರು, ಮೇಲ್ವರ್ಗದವರು’ ಎನ್ನುವ ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದರೆ, “ಮುಸ್ಲಿಮರ ಬಗ್ಗೆ ಸಾಮಾನ್ಯವಾಗಿರುವ ಪೂರ್ವಾಗ್ರಹವೇನು?” ಎನ್ನುವ ಪ್ರಶ್ನೆಗೆ , “ಮುಸ್ಲಿಮರು ಅವರ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ, ಅವರು ಶುದ್ಧ ಸಸ್ಯಾಹಾರಿಗಳು, ಉಪವಾಸದ ಸಮಯ ಅವರು ನಿದ್ರೆ ಮಾಡುವುದಿಲ್ಲ, ಮೇಲಿನ ಎಲ್ಲವೂ’ ಎನ್ನುವ ಆಯ್ಕೆಗಳನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News