×
Ad

ಚಂಡಮಾರುತದಿಂದ ತತ್ತರಿಸಿದ ಬಹಾಮಸ್‍ಗೆ 10 ಲಕ್ಷ ಡಾಲರ್ ನೆರವು ಘೋಷಿಸಿದ ಭಾರತ

Update: 2019-09-08 18:05 IST

ಹೊಸದಿಲ್ಲಿ: ಡೊರಿಯನ್ ಚಂಡಮಾರುತದಿಂದ ಅಕ್ಷರಶಃ ಧ್ವಂಸವಾಗಿರುವ ಬಹಾಮಸ್‍ಗೆ ಭಾರತ 10 ಲಕ್ಷ ಡಾಲರ್ ನೆರವಿನ ಪ್ಯಾಕೇಜ್ ನೀಡುವ ವಾಗ್ದಾನ ಮಾಡಿದೆ. ತಕ್ಷಣವೇ ಈ ಪರಿಹಾರ ಪ್ಯಾಕೇಜ್ ಬಹಾಮಸ್‍ಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

ಡೊರಿಯನ್ ಚಂಡಮಾರುತದಿಂದ ಬಹಾಮಸ್‍ನಲ್ಲಿ ವ್ಯಾಪಕ ಹಾನಿಯಾಗಿರುವ ಬಗ್ಗೆ ಅತೀವ ಬೇಸರವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಬಹಾಮಸ್‍ನ ಸ್ನೇಹಪರ ಜನತೆಯ ಪರವಾಗಿ ನಾವು ನಿಲ್ಲುತ್ತೇವೆ. ಭಾರತ ಸರ್ಕಾರ ತಕ್ಷಣಕ್ಕೆ 10 ಲಕ್ಷ ಡಾಲರ್ ವಿಕೋಪ ನೆರವನ್ನು ಭಾರತ ನೀಡಲಿದೆ" ಎಂದು ವಿದೇಶಾಂಗ ವ್ಯವಹಾರಗಳ ಖಾತೆಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ ಬಹಾಮಸ್ ದೇಶಕ್ಕೆ ಅಪ್ಪಳಿಸಿದ ಭೀಕರ ಚಂಡಮಾರುತ ಅಬಾಕೊ ದ್ವೀಪ ಮತ್ತು ಗ್ರಾಂಡ್ ಬಹಾಮ ದ್ವೀಪವನ್ನು ಅಕ್ಷರಶಃ ಧ್ವಂಸಗೊಳಿಸಿದೆ. ವಿಮಾನ ನಿಲ್ದಾಣದ ಲ್ಯಾಂಡಿಂಗ್ ಸ್ಟ್ರಿಪ್ ಹಾಗೂ ಆಸ್ಪತ್ರೆಗಳು ಸೇರಿದಂತೆ ಎಲ್ಲ ಪ್ರಮುಖ ಮೂಲಸೌಕರ್ಯಗಳು ಹಾಳಾಗಿವೆ. ಬಹಾಮಸ್‍ನಲ್ಲಿ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಏಕೈಕ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯ ಪ್ರಕಾರ ಸಾವಿನ ಪ್ರಮಾಣ ದಿಗ್ಭ್ರಮೆಗೊಳಿಸುವಂಥದ್ದು. ಪತ್ತೆಯಾಗುವ ಶವಗಳನ್ನು ತುಂಬಲು 40 ಅಡಿಯ ಎರಡು ಶೀತಲೀಕೃತ ಟ್ರಕ್‍ಗಳು ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News