ಭಾರತ 2 ಟೆಸ್ಟ್‌ಗಳಲ್ಲಿ ಜಯಿಸಿ 120 ಪಾಯಿಂಟ್ಸ್ ಪಡೆಯಿತು .. ಆಸ್ಟ್ರೇಲಿಯ ಎಷ್ಟು ಪಡೆಯಿತು ?

Update: 2019-09-09 09:22 GMT

ಮುಂಬೈ, ಸೆ.9: ವೆಸ್ಟ್‌ಇಂಡಿಸ್ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯಲ್ಲಿ 2ರಲ್ಲಿ ಜಯ ದಾಖಲಿಸಿದ ಟೀಮ್ ಇಂಡಿಯಾಕ್ಕೆ ಟೆಸ್ಟ್ ಚಾಂಪಿಯನ್‌ನ ಖಾತೆಗೆ 120 ಅಂಕಗಳು ಜಮೆ ಆಗಿದೆ. ಆದರೆ ಆಸ್ಟ್ರೇಲಿಯ ಆ್ಯಶಸ್ ಸರಣಿಯ 2 ಟೆಸ್ಟ್ ಪಂದ್ಯಗಳಲ್ಲಿ ಜಯ ಮತ್ತು 1 ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ 56 ಅಂಕಗಳು ಮಾತ್ರ ಸಿಕ್ಕಿತು ! ಯಾಕೆ ಹೀಗಾಯಿತು ?

 ಆ್ಯಶಸ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇದೆ. 4 ಪಂದ್ಯಗಳಲ್ಲಿ 1 ಪಂದ್ಯ ಜಯಿಸಿ ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಇಂಗ್ಲೆಂಡ್ 32 ಪಾಯಿಂಟ್ಸ್ ಪಡೆದಿದೆ. ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯ ಜಯ ಗಳಿಸಿದರೆ ತಂಡದ ಖಾತೆಗೆ ಇನ್ನೂ 24 ಅಂಕಗಳು ಸೇರ್ಪಡೆಯಾಗಲಿದೆ.

 ಈಗ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿನ ಪಾಯಿಂಟ್ಸ್ ಲೆಕ್ಕಾಚಾರ ಇಂತಿವೆ.

 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿದರೆ 120 ಪಾಯಿಂಟ್ಸ್ (60+60), ಟೈಯಾದರೆ ತಲಾ 30 ಮತ್ತು ಡ್ರಾಗೊಂಡರೆ ಉಭಯ ತಂಡಗಳಿಗೆ ತಲಾ 20 ಪಾಯಿಂಟ್ಸ್ ಹಂಚಿಕೆಯಾಗಲಿದೆ.

ಐದು ಪಂದ್ಯಗಳ ಸರಣಿಯಲ್ಲಿ ಎಲ್ಲ ಪಂದ್ಯಗಳನ್ನು ಜಯಿಸಿದರೆ ಆ ತಂಡಕ್ಕೆ 120 ಪಾಯಿಂಟ್ಸ್ ಸಿಗಲಿದೆ. ಒಂದು ಪಂದ್ಯ ಜಯಿಸಿದರೆ 24 ಪಾಯಿಂಟ್ಸ್ ದೊರೆಯಲಿದೆ. 1ಟೈಯಾದರೆ ಉಭಯ ತಂಡಗಳಿಗೆ ತಲಾ 15 ಪಾಂಯಿಟ್ಸ್ ಮತ್ತು 1 ಪಂದ್ಯ ಡ್ರಾಗೊಂಡರೆ ತಲಾ 10 ಅಂಕಗಳು ಉಭಯ ತಂಡಗಳಿಗೆ ದೊರೆಯಲಿದೆ.

ಪಾಯಿಂಟ್ಸ್ ಲೆಕ್ಕಚಾರ

ಸರಣಿಯಲ್ಲಿ ಪಂದ್ಯಗಳು         ಜಯ       ಟೈ          ಡ್ರಾ

 2 ಪಂದ್ಯಗಳ  ಸರಣಿ           60         30          20

 2 ಪಂದ್ಯಗಳ ಸರಣಿ            40         20          13

 4 ಪಂದ್ಯಗಳ ಸರಣಿ            30         15          10

  5 ಪಂದ್ಯಗಳ ಸರಣಿ           24         12           08

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News