×
Ad

ಅನೈತಿಕ ಸಂಬಂಧದ ಅಪರಾಧೀಕರಣಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿರುವ ಸೇನೆ

Update: 2019-09-09 22:57 IST

ಹೊಸದಿಲ್ಲಿ, ಸೆ. 9: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧ ಎಂಬ ಕಾಯ್ದೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಕಳೆದ ವರ್ಷ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಶೀಘ್ರದಲ್ಲಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಲಿದೆ. ಅದು ರಕ್ಷಣಾ ಸಚಿವಾಲಯದಲ್ಲಿ ಕೂಡ ಈ ವಿಷಯವನ್ನು ಪ್ರಶ್ನಿಸಿದೆ.

2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಸೇನೆ ಅಸಮಾಧಾನಗೊಂಡಿತ್ತು. ಆದುದರಿಂದ ಈ ತೀರ್ಪಿನ ವ್ಯಾಪ್ತಿಯಿಂದ ಸೇನೆಯನ್ನು ಹೊರಗಿಡುವಂತೆ ಅದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಲಿದೆ. ತನ್ನ ಅಧಿಕಾರಿ ವರ್ಗದ ಶಿಸ್ತಿನ ಬಗ್ಗೆ ಸೇನೆ ಚಿಂತಿತವಾಗಿದೆ. ಸೇನೆಯಲ್ಲಿ ಅನೈತಿಕ ಸಂಬಂಧ ಗಂಭೀರ ಅಪರಾಧ ಹಾಗೂ ಮರಣದಂಡನೆ ಶಿಕ್ಷೆಗೆ ಅರ್ಹವಾದುದು.

ಅನೈತಿಕ ಸಂಬಂಧ ಪ್ರಕರಣದ ಆರೋಪಿಯನ್ನು ಸೇನೆಯಿಂದ ವಜಾಗೊಳಿಸಲಾಗುತ್ತದೆ. ಕಾಯ್ದೆ 497ನ್ನು ರದ್ದುಗೊಳಿಸಿರುವುದು ಸೇನೆಯನ್ನು ಸಂಕಷ್ಟಕ್ಕೆ ದೂಡಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News