ಪ್ರೊ ಕಬಡ್ಡಿ ಲೀಗ್: ಮುಂಬಾ ತಂಡಕ್ಕೆ ಭರ್ಜರಿ ಜಯ

Update: 2019-09-10 18:12 GMT

ಕೋಲ್ಕತಾ, ಸೆ.10: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ 87ನೇ ಪಂದ್ಯದಲ್ಲಿ ಯು ಮುಂಬಾ ತಂಡ ತೆಲುಗು ಟೈಟಾನ್ಸ್ ತಂಡವನ್ನು 41-25 ಅಂಕಗಳ ಅಂತರದಿಂದ ಮಣಿಸಿತು.

ವಿಜೇತ ಮುಂಬಾ ಪರ ಅರ್ಜುನ್ ದೇಶ್ವಾಲ್ 10 ಹಾಗೂ ರೋಹಿತ್ 7 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ತೆಲುಗು ಟೈಟಾನ್ಸ್ ಪರ ರಾಕೇಶ್ ಗೌಡ 7 ಹಾಗೂ ಬಾಹುಬಲಿ ಖ್ಯಾತಿಯ ಸಿದ್ದಾರ್ಥ್ ದೇಸಾಯಿ 4 ಅಂಕಗಳಿಸಿದರು. ಟೈಟಾನ್ಸ್ ತಂಡ ಟೂರ್ನಿಯಲ್ಲಿ ಆಡಿರುವ 14ನೇ ಪಂದ್ಯದಲ್ಲಿ 5ನೇ ಸೋಲು ಕಂಡಿತು. ಮತ್ತೊಂದೆಡೆ ಮುಂಬಾ ತಂಡ ತಾನಾಡಿದ 14ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News