ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಬ್ರಿಜೇಶ್ ಯಾದವ್ ಶುಭಾರಂಭ

Update: 2019-09-10 18:18 GMT

ಎಕಟೆರಿನ್‌ಬರ್ಗ್(ರಶ್ಯ), ಸೆ.10: ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬ್ರಿಜೇಶ್ ಯಾದವ್(81ಕೆಜಿ)ಮೊದಲ ಸುತ್ತಿನ ಪಂದ್ಯದಲ್ಲಿ ಪೊಲೆಂಡ್‌ನ ಮಾಲೆವುಝ್ ಗೊನ್‌ಸ್ಕಿ ಅವರನ್ನು ಮಣಿಸಿದರು.ಈ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ.

ಈ ವರ್ಷಾರಂಭದಲ್ಲಿ ಇಂಡಿಯಾ ಓಪನ್ ಹಾಗೂ ಥಾಯ್ಲೆಂಡ್ ಓಪನ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಯಾದವ್ ಪೊಲೆಂಡ್‌ನ ಮಾಲೆವುಝ್‌ರನ್ನು 5-0 ಅಂತರದಿಂದ ಮಣಿಸಿದ್ದಾರೆ.

ಅಂತಿಮ-32ರ ಸುತ್ತಿಗೆ ತೇರ್ಗಡೆಯಾಗಿರುವ ಯಾದವ್ ಟರ್ಕಿಯ ಬೇರಾಮ್ ಮಲ್ಕಾನ್‌ರನ್ನು ಎದುರಿಸಲಿದ್ದಾರೆ. ಮಲ್ಕಾನ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಭಾರತದ ಮೂವರು ಬಾಕ್ಸರ್‌ಗಳಾದ ಅಮಿತ್ ಪಾಂಘಾಲ್(52ಕೆಜಿ), ಕವಿಂದರ್ ಸಿಂಗ್ ಬಿಶ್ತ್(57ಕೆಜಿ) ಹಾಗೂ ಆಶೀಷ್ ಕುಮಾರ್(75ಕೆಜಿ)ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 87 ದೇಶಗಳ 450ಕ್ಕೂ ಅಧಿಕ ಬಾಕ್ಸರ್‌ಗಳು ಭಾಗವಹಿಸುತ್ತಿದ್ದಾರೆ. ಈ ಟೂರ್ನಿಯು ಒಲಿಂಪಿಕ್ಸ್ ಕ್ವಾಲಿಫೈಯರ್ ಪಂದ್ಯವಾಗಿತ್ತು. ಆದರೆ, ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ಯಡವಟ್ಟಿನಿಂದಾಗಿ ಈ ಸ್ಥಾನಮಾನವನ್ನು ಹಿಂಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News