ಶ್ರೀಲಂಕಾದ ಪಾಕಿಸ್ತಾನ ಪ್ರವಾಸ: ಏಕದಿನಕ್ಕೆ ತಿರಿಮನ್ನೆ, ಟಿ-20ಗೆ ಶನಕ ನಾಯಕ

Update: 2019-09-12 04:11 GMT

ಕೊಲಂಬೊ, ಸೆ.11: ಭದ್ರತೆಯ ಕಾರಣದಿಂದ 10 ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿದ ಬಳಿಕ ಮುಂಬರುವ ಪಾಕಿಸ್ತಾನ ಕ್ರಿಕೆಟ್ ಪ್ರವಾಸಕ್ಕೆ ಶ್ರೀಲಂಕಾದ ಏಕದಿನ ಹಾಗೂ ಟ್ವೆಂಟಿ-20 ತಂಡದ ಹಂಗಾಮಿ ನಾಯಕರಾಗಿ ಕ್ರಮವಾಗಿ ಲಹಿರು ತಿರಿಮನ್ನೆ ಹಾಗೂ ದಸುನ್ ಶನಕ ಆಯ್ಕೆಯಾಗಿದ್ದಾರೆ.

ಏಕದಿನ ತಂಡದ ನಾಯಕ ಡಿ. ಕರುಣರತ್ನೆ ಹಾಗೂ ಟ್ವೆಂಟಿ-20 ನಾಯಕ ಲಸಿತ್ ಮಾಲಿಂಗ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ(ಎಸ್‌ಎಲ್‌ಸಿ)ಮಾಹಿತಿ ನೀಡಿದ ಎರಡು ದಿನಗಳ ಬಳಿಕ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿಗೆ ಬುಧವಾರ ತಂಡವನ್ನು ಪ್ರಕಟಿಸಲಾಗಿದೆ.

ಹಿರಿಯ ಆಟಗಾರರು ಪಾಕ್ ಪ್ರವಾಸ ಕೈಗೊಳ್ಳಲು ಹಿಂಜರಿದ ಕಾರಣ ಹೊಸ ಆಟಗಾರರು ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೊಸಮುಖ ಮಿನೊದ್ ಬನುಕ ಏಕದಿನ ಹಾಗೂ ಟಿ-20 ಕ್ರಿಕೆಟ್‌ಗೆ ಕಾಲಿಡಲು ಸಜ್ಜಾಗಿದ್ದಾರೆ.

ಜೂನ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಎ ತಂಡದಲ್ಲಿದ್ದ ಭಾನುಕ ರಾಜಪಕ್ಸ ಟಿ-20 ತಂಡದಲ್ಲಿದ್ದಾರೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಸೆ.27 ರಿಂದ ಅ.9ರ ತನಕ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿಯನ್ನು ಆಡಲಿವೆ.

ಏಕದಿನ ತಂಡ: ಲಹಿರು ತಿರಿಮನ್ನೆ(ನಾಯಕ), ದನುಷ್ಕ ಗುಣತಿಲಕ, ಸದೀರ ಸಮರವಿಕ್ರಮ, ಅವಿಷ್ಕ ಫೆರ್ನಾಂಡೊ, ಒಶಾದಾ ಫೆರ್ನಾಂಡೊ, ಶೆಹಾನ್ ಜಯಸೂರ್ಯ, ದಸುನ್ ಶನಕ, ಮಿನೊದ್ ಭಾನುಕ, ಆ್ಯಂಜೆಲೊ ಪೆರೇರ, ವನಿಂದು ಹಸರಂಗ, ಲಕ್ಷಣ್ ಸಂಡಕನ್, ನುವಾನ್ ಪ್ರದೀಪ್, ಇಸುರು ಉದಾನ, ಕಸುನ್ ರಜಿತಾ, ಲಹಿರು ಕುಮಾರ.

ಟಿ-20 ತಂಡ: ದಸುನ್ ಶನಕ(ನಾಯಕ), ದನುಷ್ಕ ಗುಣತಿಲಕ, ಸದೀರ ಸಮರವಿಕ್ರಮ, ಅವಿಷ್ಕ ಫೆರ್ನಾಂಡೊ, ಒಶಾಡ ಫೆರ್ನಾಂಡೊ, ಶೆಹಾನ್ ಜಯಸೂರ್ಯ, ಆ್ಯಂಜೆಲೊ ಪೆರೇರ, ಭಾನುಕ ರಾಜಪಕ್ಸ, ಮಿನೊದ್ ಭಾನುಕ, ಲಹಿರು ಮದುಶಂಕ, ವನಿಂದು ಹಸರಂಗ, ಲಕ್ಷಣ್ ಸಂಡಕನ್, ಇಸುರು ಉದಾನ, ನುವಾನ್ ಪ್ರದೀಪ್, ಕಸುನ್ ರಜಿತ ಹಾಗೂ ಲಹಿರು ಕುಮಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News