ಧೋನಿ ನಿವೃತ್ತಿಯಾಗುವುದಿಲ್ಲ

Update: 2019-09-12 18:15 GMT

ಹೊಸದಿಲ್ಲಿ, ಸೆ.12: ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಕುರಿತಂತೆ 38ರ ಹರೆಯದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಯಾವುದೇ ಮಾಹಿತಿಯನ್ನು ನಮ್ಮ್‌ಂದಿಗೆ ಹಂಚಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರು ಧೋನಿಯ ನಿವೃತ್ತಿಯ ಕುರಿತ ಎಲ್ಲ ಊಹಾಪೋಹಕ್ಕೆ ತೆರೆ ಎಳೆದರು.

ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಬಳಿಕ ಪ್ರಸಾದ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಧೋನಿಯ ನಿವೃತ್ತಿಯ ಕುರಿತು ನಿಮ್ಮ ಬಳಿ ತಾಜಾ ಮಾಹಿತಿ ಇದೆಯೇ? ಎಂದು ಪ್ರಶ್ನೆಗೆ ಉತ್ತರಿಸಿದ ಪ್ರಸಾದ್,ಱಱಇಲ್ಲ, ಖಂಡಿತವಾಗಿಯೂ ಇಲ್ಲ. ನಾನು ಈ ಸುದ್ದಿ ಕೇಳಿ ನಿಜಕ್ಕೂ ಅಚ್ಚರಿಗೊಂಡೆ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News