ಮನೀಶ್ ಎರಡನೇ ಸುತ್ತಿಗೆ ಲಗ್ಗೆ

Update: 2019-09-12 18:24 GMT

ಎಕಟೆರಿನ್‌ಬರ್ಗ್(ರಶ್ಯ), ಸೆ.12: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ನಡೆದ ಪುರುಷರ 63 ಕೆಜಿ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕಿರ್ಗಿಸ್ತಾನದ ಉಲು ಅರ್ಗೆನ್ ಕಾಡಿರ್‌ಬೆಕ್‌ರನ್ನು 5-0 ಅಂತರದಿಂದ ಮಣಿಸಿದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಬಾಕ್ಸರ್ ಮನೀಶ್ ಕೌಶಿಕ್ ಎರಡನೇ ಸುತ್ತಿಗೆ ಪ್ರವೇಶಿಸಿದರು.

 ಏಕಪಕ್ಷೀಯವಾಗಿ ಸಾಗಿದ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಕೌಶಿಕ್ ಮುಂದಿನ ಸುತ್ತಿನಲ್ಲಿ ಹಾಲೆಂಡ್‌ನ ಎನ್ರಿಕೊ ಲಾಕ್ರೂಝ್ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News