30 ಪ್ರಶಸ್ತಿ ಜಯಿಸಿದ ಬಳಿಕ ಖಬೀಬ್ ನಿವೃತ್ತಿ: ತಂದೆ ಮುನಾಫ್

Update: 2019-09-12 18:28 GMT

ಮಾಸ್ಕೋ, ಸೆ.12: ವಿಶ್ವ ವಿಖ್ಯಾತ ಯುಎಫ್‌ಸಿ ಫೈಟರ್ ರಶ್ಯದ ಖಬೀಬ್ ನೂರ್ ಮೊಹಮದೋವ್ ಎರಡು ಫೈಟ್ ಬಳಿಕ ನಿವೃತ್ತಿಯಾಗುವ ಸಾಧ್ಯತೆ ಇದೆ ಎಂದು ಖಬೀಬ್ ತಂದೆ ಹಾಗೂ ಕೋಚ್ ಅಬ್ದುಲ್‌ಮುನಾಫ್ ಹೇಳಿದ್ದಾರೆ.

ರಶ್ಯದ ನ್ಯೂಸ್ ಏಜೆನ್ಸಿ ‘ಟಾಸ್’ಗೆ ನೀಡಿದ ಸಂದರ್ಶನದಲ್ಲಿ ಖಬೀಬ್ ನಿವೃತ್ತಿಯ ಬಗ್ಗೆ ಸುಳಿವು ನೀಡಿರುವ ಮುನಾಫ್ ಅವರು ‘‘ಖಬೀಬ್‌ಗೆ 30-0 ಸಾಕು. ಮಾಸ್ಕೊದಲ್ಲಿ ಅಂತಿಮ ಹಣಾಹಣಿಯಲ್ಲಿ ಪ್ರಶಸ್ತಿಯನ್ನು ಗೆಲ್ಲುವುದನ್ನು ನಾವು ಬಯಸುತ್ತೇವೆ’’ ಎಂದು ಮುನಾಫ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News