ಐಟಿ ಅಧಿಕಾರಿ ವಿರುದ್ಧ ಈ.ಡಿ.ದಾಳಿ,: ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲು

Update: 2019-09-14 14:11 GMT

ಹೊಸದಿಲ್ಲಿ,ಸೆ.14: ಅಕ್ರಮ ಸಂಪತ್ತು ಪ್ರಕರಣದೊಂದಿಗೆ ಗುರುತಿಸಿಕೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯಲ್ಲಿ ಆಯುಕ್ತರಾಗಿರುವ ನೀರಜ ಸಿಂಗ್ ಅವರಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಶನಿವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಈ.ಡಿ.)ವು ವಿವಿಧ ಆಸ್ತಿ ದಾಖಲೆಗಳು ,ಬ್ಯಾಂಕ್ ಖಾತೆಗಳು ಮತ್ತು ಹೂಡಿಕೆ ದಾಖಲೆಗಳನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಕೋಲ್ಕತಾದಲ್ಲಿ ಐಟಿ ಇಲಾಖೆಯ ತನಿಖಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಂಗ್ ನಂತರ ಚೆನೈಗೆ ವರ್ಗಾವಣೆಗೊಂಡಿದ್ದರು.

 ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಸಿಂಗ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡ ಬಳಿಕ ಈ.ಡಿ.ಕೋಲ್ಕತಾ,ಮುಂಬೈ ಮತ್ತು ಪಾಟ್ನಾಗಳಲ್ಲಿಯ ತಲಾ ಎರಡು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿದೆ. ತನ್ನ ಅಧಿಕಾರ ಸ್ಥಾನವನ್ನು ದುರುಪಯೋಗಿಸಿಕೊಂಡು ತನ್ನ ಸಹಚರರ ಹೆಸರುಗಳಲ್ಲಿ ಭಾರೀ ಸಂಪತ್ತನ್ನು ಸಂಗ್ರಹಿಸಿದ್ದ ಆರೋಪದಲ್ಲಿ ಕೋಲ್ಕತಾ ಪೊಲೀಸರ ಎಫ್‌ಐಆರ್‌ನ ಆಧಾರದಲ್ಲಿ ಈ.ಡಿ. ಸಿಂಗ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News