ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟಣೆಗೆ ಮುನ್ನ ನಿಯೋಜಿಸಿದ್ದ 10,000 ಭದ್ರತಾ ಸಿಬ್ಬಂದಿಯ ಹಿಂದೆಗೆತ

Update: 2019-09-14 14:23 GMT

ಹೊಸದಿಲ್ಲಿ,ಸೆ.14: ಅಸ್ಸಾಮಿನಲ್ಲಿ ಅಂತಿಮ ಎನ್‌ಆರ್‌ಸಿ ಪ್ರಕಟಣೆಗೆ ಮೊದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನಿಯೋಜಿಸಲಾಗಿದ್ದ 10,000 ಅರೆ ಮಿಲಿಟರಿ ಸಿಬ್ಬಂದಿಗಳನ್ನು ಕೇಂದ್ರವು ಹಿಂದೆಗೆದುಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ಆ.31ರಂದು ಎನ್‌ಆರ್‌ಸಿ ಪ್ರಕಟಗೊಂಡ ಬಳಿಕ ಅಸ್ಸಾಮಿನಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲವಾದ್ದರಿಂದ ಪಡೆಗಳನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಎನ್‌ಆರ್‌ಸಿ ಬಿಡುಗಡೆಗೆ ಮುನ್ನ ಅಸ್ಸಾಮಿನಲ್ಲಿ ಅರೆ ಮಿಲಿಟರಿ ಪಡೆಗಳ 218 ಕಂಪನಿಗಳನ್ನು ನಿಯೋಜಿಸಲು ಗೃಹ ಸಚಿವಾಲಯವು ನಿರ್ಧರಿಸಿತ್ತು. ಅಸ್ಸಾಮಿನಲ್ಲಿ ಶಾಂತಸ್ಥಿತಿಯಿದ್ದು,ಸಚಿವಾಲಯವು ಶುಕ್ರವಾರ ರಾಜ್ಯದಲ್ಲಿಯ ಸ್ಥಿತಿಯನ್ನು ಪುನರ್‌ಪರಿಶೀಲಿಸಿದ ಬಳಿಕ 100 ಕಂಪನಿಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು. ಅರೆ ಮಿಲಿಟರಿ ಪಡೆಗಳ ಒಂದು ಕಂಪನಿಯು ಸುಮಾರು ನೂರು ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News