ವಿಯೆಟ್ನಾಂ ಓಪನ್: ಸೌರಭ್ ವರ್ಮಾ ಫೈನಲ್‌ಗೆ

Update: 2019-09-15 05:51 GMT

ಹೋ ಚಿ ಮಿನ್ಹ್ ಸಿಟಿ, ಸೆ.14: ಭಾರತದ ಶಟ್ಲರ್ ಸೌರಭ್ ವರ್ಮಾ ಇಲ್ಲಿ ನಡೆಯುತ್ತಿರುವ ವಿಯೆಟ್ನಾಂ ಬಿಡಬ್ಲುಎಫ್ ಟೂರ್ ಸೂಪರ್-100 ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ 51 ನಿಮಿಷಗಳಲ್ಲಿ ಕೊನೆಗೊಂಡ ಸೆಮಿ ಫೈನಲ್ ಹಣಾಹಣಿಯಲ್ಲಿ ದ್ವಿತೀಯ ಶ್ರೇಯಾಂಕದ ಸೌರಭ್ ಜಪಾನ್‌ನ ಮಿನೊರು ಕೊಗಾರನ್ನು 22-20, 21-15 ಗೇಮ್‌ಗಳ ಅಂತರದಿಂದ ಮಣಿಸಿದರು.

ಸೌರಭ್ ಫೈನಲ್ ಹಾದಿಯಲ್ಲಿ ಒಂದೂ ಗೇಮ್‌ನ್ನು ಸೋತಿಲ್ಲ. ಆದರೆ, ಸೆಮಿ ಫೈನಲ್ ಪಂದ್ಯದುದ್ದಕ್ಕೂ ಜಪಾನ್ ಎದುರಾಳಿ ಕೊಗಾ ಕಠಿಣ ಹೋರಾಟ ನೀಡಿದರು. ಎರಡೂ ಗೇಮ್‌ಗಳಲ್ಲಿ ದಿಟ್ಟ ಪ್ರದರ್ಶನ ನೀಡಿದ ವಿಶ್ವದ ನಂ.38ನೇ ಆಟಗಾರ ಸೌರಭ್ ಎರಡೂ ಗೇಮ್‌ಗಳಲ್ಲಿ ಜಯ ದಾಖಲಿಸಿದರು.

ಸೌರಭ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಚೀನಾದ ಸನ್ ಫೀ ಕ್ಸಿಯಾಂಗ್‌ರನ್ನು ಎದುರಿಸಲಿದ್ದಾರೆ.ಕ್ಸಿಯಾಂಗ್ ಅವರು ಲಿನ್ ಯು ಸಿಯೆನ್‌ರನ್ನು 21-17, 21-16 ಗೇಮ್‌ಗಳ ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News