×
Ad

ಅಸ್ಸಾಂ ನಂತರ ಹರ್ಯಾಣದಲ್ಲಿ ಎನ್ ಆರ್ ಸಿ: ಖಟ್ಟರ್ ಘೋಷಣೆ

Update: 2019-09-15 21:48 IST

ಚಂಡಿಗಡ,ಸೆ.15: ಅಸ್ಸಾಂ ನಂತರ ಹರ್ಯಾಣದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ತರುವುದಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ತಿಳಿಸಿದ್ದಾರೆ. ನಿವೃತ್ತ ನ್ಯಾಯಾಧೀಶ ಎಚ್.ಎಸ್ ಭಲ್ಲ ಮತ್ತು ನೌಕಾಪಡೆಯ ಮಾಜಿ ಅಡ್ಮಿರಲ್ ಸುನೀಲ್ ಲಾಂಬ ಅವರನ್ನು ಭೇಟಿಯಾದ ನಂತರ ಪಂಚಕುಲದಲ್ಲಿ ವರದಿಗಾರರ ಜೊತೆ ಮಾತನಾಡುವ ವೇಳೆ ಕಟ್ಟರ್ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೂ ಮೊದಲು ಪಕ್ಷ ನಡೆಸುತ್ತಿರುವ ಮಹಾ ಸಂಪರ್ಕ ಅಭಿಯಾನದ ಭಾಗವಾಗಿ ಕಟ್ಟರ್ ನಿವೃತ್ತ ಅಧಿಕಾರಿಗಳನ್ನು ಭೇಟಿಯಾದರು. ಮೊದಲಿನಿದಲೂ ಕಟ್ಟರ್ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿ ಮಾಡುವ ಪರ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ನಿವೃತ್ತಿಯ ನಂತರ ನ್ಯಾಯಾಧೀಶ ಭಲ್ಲ ಅವರು ನನ್ನ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಅವರೂ ಎನ್‌ಆರ್‌ಸಿ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಶೀಘ್ರದಲ್ಲಿ ನಾವಿಬ್ಬರು ಅಸ್ಸಾಂಗೆ ತೆರಳಲಿದ್ದೇವೆ ಎಂದು ಕಟ್ಟರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News