ರಾಷ್ಟ್ರಪತಿ ಕೋವಿಂದ್ ವಿಮಾನದಲ್ಲಿ ತಾಂತ್ರಿಕ ದೋಷ: ಏರ್ ಇಂಡಿಯಾದಿಂದ ತನಿಖೆಗೆ ಆದೇಶ

Update: 2019-09-16 14:23 GMT

 ಹೊಸದಿಲ್ಲಿ,ಸೆ.16: ತಾಂತ್ರಿಕ ದೋಷದಿಂದಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ವಿಮಾನ ರವಿವಾರದಂದು ಝ್ಯೂರಿಚ್‌ನಲ್ಲಿ ಮೂರು ಗಂಟೆಗಳ ಕಾಲ ವಿಳಂಬವಾಗಿರುವ ಬಗ್ಗೆ ಸಂಪೂರ್ಣ ತನಿಖೆ ನಡೆಸುಂತೆ ಏರ್ ಇಂಡಿಯಾ ಆದೇಶಿಸಿದೆ.

ಬೋಯಿಂಗ್ 747 ವಿಮಾನ ರಾಷ್ಟ್ರಪತಿಯವರನ್ನು ಝ್ಯೂರಿಚ್‌ನಿಂದ ಸ್ಲೊವೇನಿಯಾಕ್ಕೆ ಕೊಂಡೊಯ್ಯುತ್ತಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮೂರು ಗಂಟೆಗಳ ಕಾಲ ವಿಳಂಬವಾಗಿ ಹಾರಾಟ ನಡೆಸಿತ್ತು. ಮೊದಲಿಗೆ ರಾಷ್ಟ್ರಪತಿಯನ್ನು ವಿಮಾನ ನಿಲ್ದಾಣದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರೂ ನಂತರ ಅವರಿಗೆ ಹೋಟೆಲ್‌ಗೆ ತೆರಳುವಂತೆ ಮನವಿ ಮಾಡಲಾಯಿತು. ಸಮಸ್ಯೆಯನ್ನು ಝ್ಯೂರಿಚ್‌ನಲ್ಲೇ ಸರಿಪಡಿಸಿದ ನಂತರ ಕೋವಿಂದ್ ಅವರನ್ನು ಸ್ಲೊವೇನಿಯಾಕ್ಕೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News