ಈ 70ರ ವೃಧ್ಧನಿಗೆ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧುರನ್ನು ವಿವಾಹವಾಗಬೇಕಂತೆ!

Update: 2019-09-17 13:05 GMT

ಚೆನ್ನೈ :ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 70 ವರ್ಷದ ವೃದ್ಧ ಮಲೈಸಾಮಿ ಎಂಬಾತನಿಗೆ ವಿಚಿತ್ರ ಆಸೆಯೊಂದಿದೆ. ಈತನಿಗೆ ಇಪ್ಪತ್ನಾಲ್ಕರ ಹರೆಯದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಅವರನ್ನು ವಿವಾಹವಾಗಬೇಕಂತೆ. ಈ ಕುರಿತಂತೆ ಮಲೈಸಾಮಿ ಜಿಲ್ಲಾ ಕಲೆಕ್ಟರ್ ಗೆ ಮನವಿಯೊಂದನ್ನೂ ಸಲ್ಲಿಸಿದ್ದಾನೆ. ಅಷ್ಟೇ ಅಲ್ಲ, ಸಿಂಧು ಜತೆ ತನ್ನ ವಿವಾಹ ನೆರವೇರಿಸದೇ ಇದ್ದರೆ ಆಕೆಯನ್ನು ಅಪಹರಿಸಿಯಾದರೂ ಮದುವೆಯಾಗುತ್ತೇನೆಂದೂ ಆತ ಬೆದರಿಕೆಯೊಡ್ಡಿದ್ದಾನೆ.

ಈ ವಿಚಿತ್ರ ಘಟನೆ ನಡೆದಿದ್ದು ಜಿಲ್ಲಾ ಕಲೆಕ್ಟರ್ ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತಿ ವಾರ ನಡೆಸುವ ಸಭೆಯಲ್ಲಿ. ತನ್ನ ಕೈಯ್ಯಲ್ಲಿ ಸಿಂಧು ಭಾವಚಿತ್ರವಿರುವ ಪತ್ರವನ್ನು ಹಿಡಿದುಕೊಂಡು ಮಲೈಸಾಮಿ ಅಲ್ಲಿಗೆ ಬಂದಿದ್ದ. ಸಿಂಧು ಬ್ಯಾಡ್ಮಿಂಟನ್ ಪ್ರತಿಭೆಗೆ ಮನಸೋತಿದ್ದು ಆಕೆಯನ್ನು ತನ್ನ ಬಾಳಸಂಗಾತಿಯನ್ನಾಗಿಸಬೇಕೆಂದು ಹೇಳಿಕೊಂಡಿದ್ದಾನೆ.

ಅಷ್ಟೇ ಅಲ್ಲ, ತನಗೆ ಕೇವಲ 16 ವರ್ಷ ತಾನು ಎಪ್ರಿಲ್ 4, 2004ರಂದು ಹುಟ್ಟಿದ್ದಾಗಿಯೂ ಆತ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News